Home Karnataka State Politics Updates ಬಿಜೆಪಿ ಯಡಿಯೂರಪ್ಪ ಅವರನ್ನ ಹಿನ್ನೆಲೆಗೆ ತಳ್ಳಿದೆ.

ಬಿಜೆಪಿ ಯಡಿಯೂರಪ್ಪ ಅವರನ್ನ ಹಿನ್ನೆಲೆಗೆ ತಳ್ಳಿದೆ.

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ. ಆದರೆ, ಆರ್‌ಎಸ್‌ಎಸ್‌ ಹಾಗೂ ಕೆಲವು ಮುಖಂಡರು ಈಗ ಅವರನ್ನೇ ಹಿನ್ನೆಲೆಗೆ ತಳ್ಳಿದ್ದಾರೆ. ಆ ಪಕ್ಷದ ಮುಖಂಡರು ತಮ್ಮ ಮನೆಯಲ್ಲೇ ಇಷ್ಟು ದೊಡ್ಡ ಬಿರುಕು ಇಟ್ಟುಕೊಂಡು, ಕಾಂಗ್ರೆಸ್‌ ಟೀಕಿಸುವುದು ಹಾಸ್ಯಾಸ್ಪದ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಕಾಂಗ್ರೆಸ್‌ನಲ್ಲಿ ಗೊಂದಲವಿದೆ, ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರ ನಡುವೆ ವಿರಸವಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಆದರೆ, ಅವರ ಪಕ್ಷವು ದೊಡ್ಡ ಸಮುದಾಯದ ಹಿರಿಯ ನಾಯಕರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಜನರಿಗೆ ತಿಳಿಸಲಿ ಎಂದರು.

ಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಿ ಜನರ ಭಾವನೆಗಳ ಜತೆ ಚಲ್ಲಾಟವಾಡಿ, ಮತ ಗಿಟ್ಟಿಸಿಕೊಳ್ಳುವುದು ಬಿಜೆಪಿಯವರಿಗೆ ರೂಢಿಯಾಗಿದೆ. ಆದರೆ, ಕಾಂಗ್ರೆಸ್‌ ಜೀವನ ಕಟ್ಟಿಕೊಡುವ ಪಕ್ಷ. ನಿಮ್ಮಂತೆ ಚಲ್ಲಾಟವಾಡುವುದಿಲ್ಲ. ಇದನ್ನು ಮನಗಂಡು ಮತದಾರರು ಪರಿಷತ್ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.