ಉನ್ನತ ಶಿಕ್ಷಣ ಜನಸಾಮಾನ್ಯರ ಬದುಕಿನ ವಿಕಾಸಕ್ಕೆ ಕೊಡುಗೆ ನೀಡಲಿ.

Share the Article

ಉನ್ನತ ಶಿಕ್ಷಣವು ಏಕ್ ಭಾರತ, ಶ್ರೇಷ್ಠ ಭಾರತ ಹಾಗೂ ಆತ್ಮನಿರ್ಭರ ಭಾರತ ನಿರ್ಮಿಸಲು ಪೂರಕವಾಗಬೇಕು. ಪದವೀಧರರು ದೇಶದ ಜನಸಾಮಾನ್ಯರ ಬದುಕಿನ ವಿಕಾಸಕ್ಕೆ ಕೊಡುಗೆಗಳನ್ನು ನೀಡಬೇಕು ಎಂದು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು.
ಕವಿವಿ ಗಾಂಧಿಭವನದಲ್ಲಿ ನಡೆದ 72 ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ವಿವಿಯು 73 ವರ್ಷಗಳಿಗೂ ಅಧಿಕ ಕಾಲದಿಂದ ಶಿಕ್ಷಣ ಹಾಗೂ ದೇಶದ ವಿಕಾಸಕ್ಕೆ ತನ್ನ ಕೊಡುಗೆಗಳನ್ನು ನೀಡಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ. ನಾವು ನಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿ ಜನಸಾಮಾನ್ಯರ ಬದುಕಿನ ಏಳ್ಗೆಗೆ ಕಾರಣರಾಗಬೇಕು. ಜೀವನ ಸಾರ್ಥಕ ಪಡಿಸಿಕೊಳ್ಳಲು ನಿಮ್ಮ ಶಿಕ್ಷಣ ವರದಾನವಾಗಿದೆ. ಏಕ ಭಾರತ, ಶ್ರೇಷ್ಠ ಭಾರತ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಉನ್ನತ ಶಿಕ್ಷಣ ಪಡೆದವರ ಕೊಡುಗೆ ಅಧಿಕವಾಗಿ ಪ್ರಾಪ್ತಿಯಾಗಬೇಕು.ಶಿಕ್ಷಣದ ಪ್ರಸಾರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಭಾರತ ಸರ್ಕಾರದ ನೂತನ ಶಿಕ್ಷಣ ನೀತಿಯು ಸ್ಥಳೀಯ ಭಾಷೆಗೆ, ಕ್ರೀಡೆಗಳಿಗೆ ಆದ್ಯತೆ ಇದೆ. ಕ್ರೀಡೆಗಳ ಮೂಲಕ ಆರೋಗ್ಯಭಾರತ, ಸದೃಢ ಕರ್ನಾಟಕ ಕಟ್ಟಬೇಕು ಎಂದರು.

Leave A Reply