Home ಬೆಂಗಳೂರು ಮಲತಾಯಿಯ ನಿಜ ರೂಪದರ್ಶನ | ಹಸುಳೆಯ ಕೈ ಸುಟ್ಟು ವಿಕೃತಿ ಮೆರೆದ ರಾಕ್ಷಸಿ!!!

ಮಲತಾಯಿಯ ನಿಜ ರೂಪದರ್ಶನ | ಹಸುಳೆಯ ಕೈ ಸುಟ್ಟು ವಿಕೃತಿ ಮೆರೆದ ರಾಕ್ಷಸಿ!!!

Hindu neighbor gifts plot of land

Hindu neighbour gifts land to Muslim journalist

ಈಕೆಯನ್ನು ನಿಜವಾಗಲೂ ಹೆಣ್ಣು ಎನ್ನಲು ಸಾಧ್ಯವಿಲ್ಲ. ಯಾವುದೇ ರಾಕ್ಷಸಿ ರೂಪದಲ್ಲಿರೋ ಹೆಮ್ಮಾರಿ ಅಂತಾನೇ ಹೇಳಬಹುದು. ಏಕೆಂದರೆ ಈಕೆ ಮಲತಾಯಿ. ತಾಯಿ ಶಬ್ದದ ಅರ್ಥನೇ ತಿಳಿಯದ ಕಟುಕಿ ಈಕೆ.‌

ಮೊದಲ ಹೆಂಡತಿ ತೀರಿಹೋದಳೆಂದು, ತಂದೆಯಾದವ ತನ್ನ ಮಗುವಿಗೆ ಹೊಸ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಆಕೆ ಮಾಡಿದ ಕೆಲಸಕ್ಕೆ ಇಡೀ ಊರಿನ ಜನ ಛೀ ಥೂ ಎಂದು ಹೇಳುತ್ತಿದ್ದಾರೆ.

ಪುಟ್ಟ ಮಗು ತನ್ನ ಮಾತು ಕೇಳುತ್ತಿಲ್ಲ ಎಂದು ಮಲತಾಯಿಯೊಬ್ಬಳು ಕಾದ ಕಬ್ಬಿಣದಿಂದ ಮಗುವಿನ ಕೈ ಸುಟ್ಟ ಅಮಾನವೀಯ ಘಟನೆ ಚಿತ್ತಾಪೂರ ತಾಲೂಕಿನ ನಾಲವಾರ ಸ್ಟೇಷನ್ ಏರಿಯಾದಲ್ಲಿ ನಡೆದಿದೆ.

ನಾಲವಾರ ತಾಂಡಾ ನಿವಾಸಿ ಮರೆಮ್ಮ ನಾಲ್ಕು ವರ್ಷದ ಮಗುವಿನ ಮೇಲೆ ವಿಕೃತಿ ಮೆರೆದ ಮಲತಾಯಿ.
ತಾನು ಹೇಳಿದ ಮಾತು ಕೇಳುತ್ತಿಲ್ಲ ಹಾಗೆಯೇ ಹೊರಗಡೆ ಹೋಗುತ್ತೆ ಎಂಬ ಕಾರಣಕ್ಕೆ ಕಾದ ಕೊಳವೆಯಿಂದ ಕೈಗೆ ಸುಟ್ಟು, ಮಂಚಕ್ಕೆ ಕಟ್ಟಿ ಹಾಕಿ ಹೀನ ಕೃತ್ಯ ಎಸಗಿದ್ದಾಳೆ.
ಈಕೆಯ ಗಂಡ ತಿಪ್ಪಣ್ಣ ಮೊದಲ ಪತ್ನಿ ಸಾವಿನ ನಂತರ ಇವಳನ್ನು ವಿವಾಹವಾಗಿದ್ದ. ಕೆಲ ದಿನಗಳ ಬಳಿಕ ಹೆಂಡತಿ ಹಾಗೂ ಮಗುವನ್ನು ಬಿಟ್ಟು ಪುಣೆಗೆ ಹೋಗಿದ್ದಾನೆ. ಈ
ವೇಳೆ ಮಲತಾಯಿ ಅಮಾನವೀಯ ಕೃತ್ಯವನ್ನು ಎಸಗಿದ್ದಾಳೆ.

ಎರಡು ದಿನಗಳಿಂದ ಮಗು ಆಚೆ ಬಾರದಿದ್ದಕ್ಕೆ ಸ್ಥಳೀಯರು ಅನುಮಾನಗೊಂಡು, ಮನೆಗೆ ಹೋಗಿ ವಿಚಾರಿಸಿದಾಗ ಮಗುವನ್ನು ಮಂಚಕ್ಕೆ ಕಟ್ಟಿ ಹಾಕಿ ಕೈ ಸುಡಲಾಗಿತ್ತು. ಕೂಡಲೇ ಸ್ಥಳೀಯರು ಮನೆಯಲ್ಲಿದ್ದ ಮಗುವನ್ನು ರಕ್ಷಿಸಿದ್ದಾರೆ. ನಂತರ ಮಲತಾಯಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಪ್ರಶ್ನೆ ಮಾಡಿದ್ದಕ್ಕೆ ನಾನು ಸುಡುವುದು ಹೀಗೆ, ನನ್ನನ್ನು ಕೇಳಲು ನೀವು ಯಾರು..? ಎಂದು ಉದ್ಧಟತನದಿಂದ ಮಾತನಾಡಿದ್ದಾಳೆ.

ಸ್ಥಳೀಯರು ವಾಡಿ ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.