ಬೆಳ್ತಂಗಡಿ : ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೊಳಗಾದ ಗ್ರಾಮ ಸಹಾಯಕ ಸಾವು !

Share the Article

ಬೆಳ್ತಂಗಡಿ : ಕರ್ತವ್ಯದಲ್ಲಿದ್ದ ಗ್ರಾಮ ಸಹಾಯಕರೊಬ್ಬರು ದಿಢೀರ್ ಹೃದಯಾಘಾತದಿಂದ ನಿಧನರಾದ ಘಟನೆ ಇಂದು ಬೆಳ್ತಂಗಡಿಯಲ್ಲಿ ನಡೆದಿದೆ. ಮೇಲಂತಬೆಟ್ಟು, ಸವಣಾಲು, ಮುಂಡೂರು ಗ್ರಾಮದ ಗ್ರಾಮಸಹಾಯಕರಾಗಿದ್ದ ಸುಂದ‌ರ್ ಗೌಡ (44) ಎಂಬಾತರೇ ಮೃತರಾದವರು.

ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಗ್ರಾಮ ಸಹಾಯಕ ಸುಂದರ ಗೌಡ ಮತ್ತು ಗ್ರಾಮ ಲೆಕ್ಕಿಗ ಶಿವಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಶಿವಕುಮಾರ್ ಹೊರಗಡೆ ಹೋಗಿ ಮತ್ತೆ ಕಚೇರಿಗೆ ಬಂದಾಗ ಸುಂದರ್ ಗೌಡ ಕುರ್ಚಿಯಿಂದ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ.

ತಕ್ಷಣ ಅವರನ್ನು ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ಸುಂದರ್ ಗೌಡ ನಿಧನಹೊಂದಿದ್ದಾರೆ. ವಿಚಾರ ತಿಳಿದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕು ಕಚೇರಿ ಸಿಬ್ಬಂದಿ, ತಹಶೀಲ್ದಾರ್, ಗ್ರಾಮಲೆಕ್ಕಿಗ, ಗ್ರಾಮಸಹಾಯಕರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ.

Leave A Reply