Home News ಸೋಲಾರ್ ದೀಪದ ಕಂಬಕ್ಕೆ ದನದ ಬುರುಡೆ ಕಟ್ಟಿ ವಿಕೃತಿ ಮೆರೆದ ಕಿಡಿಗೇಡಿಗಳು !!

ಸೋಲಾರ್ ದೀಪದ ಕಂಬಕ್ಕೆ ದನದ ಬುರುಡೆ ಕಟ್ಟಿ ವಿಕೃತಿ ಮೆರೆದ ಕಿಡಿಗೇಡಿಗಳು !!

Hindu neighbor gifts plot of land

Hindu neighbour gifts land to Muslim journalist

ಬೀದಿ ದೀಪಗಳನ್ನು ಕಳ್ಳತನ ಮಾಡಿದ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗ ಇನ್ನೂ ಎರಡು ಹೆಜ್ಜೆ ಮುಂದಿಟ್ಟಿರುವ ದುಷ್ಕರ್ಮಿಗಳು ಸೋಲಾರ್ ಕಂಬಕ್ಕೆ ದನದ ಬುರುಡೆ ಕಟ್ಟಿ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ.

ಗೋಕಾಕ್ ನಗರ – ಗೋಕಾಕ್ ಫಾಲ್ಸ್ ರಸ್ತೆ ಮಧ್ಯೆ ಸೋಲಾರ್ ದೀಪ ಅಳವಡಿಕೆ ಮಾಡಲಾಗಿತ್ತು.‌ ಯಾರು ಇರದ ವೇಳೆ ಸೋಲಾರ್ ದೀಪ ಕಳ್ಳತನ ಮಾಡಿದ ಬಳಿಕ ದೀಪದ ಕಂಬಕ್ಕೆ ಜಾನುವಾರುಗಳ ಬುರುಡೆ ಕಟ್ಟಿ ವಿಕೃತಿ ಮೆರೆದಿದ್ದಾರೆ.

ಎರಡ್ಮೂರು ಕಂಬಗಳಿಗೆ ಜಾನುವಾರುಗಳ ಬುರುಡೆ ಅಳವಡಿಕೆ ಮಾಡಲಾಗಿದೆ. ಎರಡು ದಿನಗಳಿಂದ ತಲೆಬುರುಡೆ ಹಾಗೆ ಇದ್ದು, ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕೂಡ ಬುರುಡೆಗಳನ್ನು ತೆರವು ಮಾಡಿಲ್ಲ.

ಗೋಕಾಕ್ ಶಹರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಅದಲ್ಲದೆ ಈ ರೀತಿ ವಿಕೃತಿ ಮೆರೆದವರನ್ನು ಆದಷ್ಟು ಬೇಗ ಬಂಧಿಸಬೇಕೆಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.