Home ದಕ್ಷಿಣ ಕನ್ನಡ ಮತ್ತೊಂದು ರಿವೆಂಜ್ ಮರ್ಡರ್ ‌ಗೆ ಸಾಕ್ಷಿಯಾದ ದ.ಕ | ಹಳೆ ದ್ವೇಷಕ್ಕೆ ಬಿತ್ತು ಮತ್ತೊಂದು ಹೆಣ!

ಮತ್ತೊಂದು ರಿವೆಂಜ್ ಮರ್ಡರ್ ‌ಗೆ ಸಾಕ್ಷಿಯಾದ ದ.ಕ | ಹಳೆ ದ್ವೇಷಕ್ಕೆ ಬಿತ್ತು ಮತ್ತೊಂದು ಹೆಣ!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಬೈಕಂಪಾಡಿ ಮೀನಕಳಿಯ ನಿವಾಸಿ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ರಾಜ (29)ಓರ್ವನಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಂಪಾಡಿ ಮೀನಕಳಿಯದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಗಂಭೀರ ಗಾಯಗೊಂಡ ಆತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸಂಜೆ ಬೀಚ್ ನಲ್ಲಿದ್ದ ರಾಜಾನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೆಯ ದಿನ ತನ್ನ ಗರ್ಭಿಣಿ ಹೆಂಡತಿಯ ಹುಟ್ಟುಹಬ್ಬ ಆಚರಿಸಿ ಸಂಭ್ರಮದಲ್ಲಿದ್ದ ರಾಜನ ಸಾವು ಆತನ ಮನೆ ಮಂದಿ ಶಾಕ್ ನೀಡಿದಂತೂ ಸುಳ್ಳಲ್ಲ.

ದುಷ್ಕರ್ಮಿಗಳನ್ನು ರಾಘವೇಂದ್ರನ ಸ್ನೇಹಿತರೆಂದು ಆರೋಪಿಸಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2019 ರ ಕೊಲೆಗೆ ನಡೆಯಿತೇ ಈ ಹತ್ಯೆ ?

2019 ರಂದು ನಡೆದಿದ್ದ, ಸಂದೇಶ್ ಪೂಜಾರಿ ಎಂಬಾತನ ಕೊಲೆ ನಡೆದಿತ್ತು. ಸುರತ್ಕಲ್ ಬಾರೊಂದರಲ್ಲಿ ಎರಡು ತಂಡಗಳ ನಡುವೆ ಜಗಳ ನಡೆದಿದ್ದು ನಂತರ, ಜೊತೆಗಿದ್ದ ಹಳೆಯ ಗೆಳೆಯರೇ ಸಂದೇಶ್ ನನ್ನು ಕೊಲೆ ಮಾಡಿದ್ದರು. ನಂತರ ರಾಜಾ ಅಲಿಯಾಸ್ ರಾಘವೇಂದ್ರ, ಗಣೇಶ್‌ ಮತ್ತು ಸೊಹೈಲ್ ಎಂಬ ಮೂವರನ್ನು ಸುರತ್ಕಲ್ ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.

ನಂತರ, ಮನು ಗುಡ್ಡೆಕೊಪ್ಲ(40), ಶರತ್ ಅಲಿಯಾಸ್ ಮುನ್ನ(35), ಪ್ರವೀಣ್ ಕುಂದರ್(42), ದೀಪಕ್ ರಾಜ್(33) ಮತ್ತು ಮಿಥುನ್ (40) ಎಂಬವರನ್ನು ಪೊಲೀಸರು ಬಂಧಿಸಿದ್ದರು‌. ಈ ಪೈಕಿ ಪ್ರಮುಖ ಆರೋಪಿ ಮನೋಜ್, ಕೊಲೆಯಾಗಿದ್ದ ಸಂದೇಶ್ ಪೂಜಾರಿಯ ಸ್ನೇಹಿತನೇ ಆಗಿದ್ದ. ಇದೀಗ ಸಂದೇಶ್ ಸ್ನೇಹಿತರೇ ರಾಜಾನ ಮೇಲೆ ತಲವಾರು ದಾಳಿ ನಡೆಸಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.