Home latest ಮಸಾಜ್ ಪಾರ್ಲರ್ ಗೆ ಜನಪ್ರಿಯವಾಗಿರುವ “ಪುಟ್ಟ ಕರಾವಳಿ” ರಾಜ್ಯ ‘ಗೋವಾ’ ದಲ್ಲಿ ಇನ್ನು ಮುಂದೆ ನೋ...

ಮಸಾಜ್ ಪಾರ್ಲರ್ ಗೆ ಜನಪ್ರಿಯವಾಗಿರುವ “ಪುಟ್ಟ ಕರಾವಳಿ” ರಾಜ್ಯ ‘ಗೋವಾ’ ದಲ್ಲಿ ಇನ್ನು ಮುಂದೆ ನೋ “ಮಸಾಜ್ ಪಾರ್ಲರ್ ” : ಸಿಎಂ ಆದೇಶ

Hindu neighbor gifts plot of land

Hindu neighbour gifts land to Muslim journalist

ಪ್ರವಾಸಕ್ಕೆ ಹೋಗೋಣ ಎಂದು ಮೊದಲಿಗೆ ಯೋಚನೆ ಮಾಡಿದರೆ ಮೊದಲು ನೆನಪಾಗುವುದು ಗೋವಾ. ಗೋಬಾ ಬೀಚ್, ಅಲ್ಲಿನ ಸುಂದರತೆ ನಿಸರ್ಗದ ವಾತಾವರಣ ಎಂತವರನ್ನು ಕೂಡಾ ತನ್ಮಯಗೊಳಿಸದೇ ಬಿಡುವುದಿಲ್ಲ. ಆದರೆ ಮಸಾಜ್ ಪಾರ್ಲರ್ ಗಳಿಂದಲೇ ಜನಪ್ರಿಯವಾಗಿರುವ ಪುಟ್ಟ ಕರಾವಳಿ ರಾಜ್ಯದಲ್ಲಿ ಇಂದಿನಿಂದ (ಜೂನ್ 6) ಎಲ್ಲಾ ಮಸಾಜ್ ಪಾರ್ಲ ರ್ ಗಳನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ರಾಜ್ಯದಲ್ಲಿ ಕ್ರಾಸ್ ಮಸಾಜ್‌ಗಳನ್ನು ಸಹ ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. (ಕ್ರಾಸ್ ಮಸಾಜ್ ಎಂದರೆ ಮಹಿಳೆಯರು ಪುರುಷರಿಗೆ ಮಾಡುವ ಮಸಾಜ್)

ಉತ್ತರ ಗೋವಾದ ಮಾಪುಸಾ ಪಟ್ಟಣದಲ್ಲಿ 11 ಪ್ರವಾಸಿಗರನ್ನು ಮಸಾಜ್ ಪಾರ್ಲರ್ ನಿರ್ವಾಹಕರು ಅಮಾನುಷವಾಗಿ ಥಳಿಸಿದ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಹೀಗಾಗಿ ನೋಂದಾಯಿತ ಆಯುರ್ವೇದಿಕ್ ಸ್ಪಾಗಳೊಂದಿಗೆ ರಾಜ್ಯದಲ್ಲಿ ಸ್ಪಾಗಳು ಮತ್ತು ಬ್ಯೂಟಿ ಪಾರ್ಲರ್ ಗಳು ಮಾತ್ರ ಕಾರ್ಯನಿರ್ವಹಿಸಲು ಪರವಾನಗಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ನಾಳೆಯಿಂದ ಎಲ್ಲಾ ಅಕ್ರಮ ಮಸಾಜ್ ಪಾರ್ಲ‌ರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವು ಮಸಾಜ್ ಪಾರ್ಲ‌ರ್ ಗಳು ಯಾವುದೇ ವರ್ಗದ ಅಡಿಯಲ್ಲೂ ಪರವಾನಗಿ ಪಡೆದಿಲ್ಲ. ಸ್ಪಾಗಳನ್ನು ನೋಂದಾಯಿಸಿದ್ದರೂ, ಯಾವುದೇ ಅಕ್ರಮ ಮಸಾಜ್ ಪಾರ್ಲ‌ರ್ ಗಳಿದ್ದರೆ ಅವುಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ, ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೇವಲ ಬ್ಯೂಟಿ ಪಾರ್ಲರ್, ಸ್ಪಾಗಳನ್ನು ಅವರು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದರೆ ಮತ್ತು ಯಾವುದೇ ಕ್ರಾಸ್ ಮಸಾಜ್‌ಗಳಿಲ್ಲದಿದ್ದರೆ ಅಂತಹ ಪಾರ್ಲರ್ ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಆಯುರ್ವೇದ ಸ್ಪಾಗಳನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ನೋಂದಾಯಿತ ವೈದ್ಯರು ಅವುಗಳನ್ನು ಅನುಮತಿಸಬೇಕು ಎಂದು ಅವರು ಹೇಳಿದರು.