ಕಲಬುರಗಿ: ಹೊರವಲಯದ ಚಾರ್ ಕಮಾನ್ ಬಳಿ ಆರೆಂಜ್‌ ಸಂಸ್ಥೆಯ ಬಸ್ ಮತ್ತು ಟೆಂಪೊ ಮಧ್ಯೆ ಡಿಕ್ಕಿ ಸಂಭವಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಜನ ಪ್ರಯಾಣಿಕರು ಬಸ್‌ನ ಒಳಗೆ ಸಿಲುಕಿ, ಸಜೀವ ದಹನವಾಗಿದ್ದಾರೆ.

Share the Article

ಹೈದ್ರಾಬಾದ್ ನಿಂದ ಗೋವಾಕ್ಕೆ ಹೋಗುತ್ತಿದ್ದ ಬಸನಲ್ಲಿ 29 ಜನ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಅಪಘಾತ ಸಂಭವಿಸಿದೆ.

22 ಜನರನ್ನು ಬಸ್‌ನಿಂದ ಹೊರ ಬಂದಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಟೆಂಪೊ ಚಾಲಕನ ಎರಡು ಕಾಲುಗಳು ತುಂಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಕಲಬುರಗಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಪ್ರಯಾಣಿಕರು ಹೈದ್ರಾಬಾದ್ ಮೂಲದವರು ಎಂದು ತಿಳಿದು ಬಂದಿದೆ.

Leave A Reply