ಶಾಕಿಂಗ್ ನ್ಯೂಸ್ !! | PFI ನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕುತಂತ್ರಿ ಚೀನಾ !??

ಇತ್ತೀಚಿನ ದಿನಗಳಲ್ಲಿ ಪಿಎಫ್ಐ ಸಂಘಟನೆಯ ಒಂದೊಂದೇ ಅಕ್ರಮಗಳು ಹೊರಬರುತ್ತಿವೆ. ಮೊನ್ನೆ ತಾನೇ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಪಿಎಫ್‌ಐಗೆ ಸೇರಿದ 33 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಇದೀಗ ಪಿಎಫ್‌ಐಗೆ ಸಂಬಂಧಿಸಿದ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ.

ಪಿಎಫ್‌ಐಗೆ ಚೀನಾ ಮತ್ತು ಗಲ್ಫ್ ದೇಶಗಳಿಂದ ದೇಣಿಗೆ ಹರಿದುಬಂದಿದೆ. 2019-20ರಲ್ಲಿ ಪಿಎಫ್‌ಐ ಸದಸ್ಯ, ಸಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ರೌಫ್ ಷರೀಫ್ ಅವರ ಬ್ಯಾಂಕ್ ಖಾತೆಗೆ ಚೀನಾದಿಂದಲೇ 1 ಕೋಟಿಗೂ ಹೆಚ್ಚು ಹಣ ಜಮೆ ಆಗಿದೆ. ಬೆಂಗಳೂರು ಗಲಭೆ ಆರೋಪಿ ಎಸ್‌ಡಿಪಿಐನ ಕಲೀಂ ಪಾಶಾ ಖಾತೆಗೆ ಚೀನಾ ಮೂಲದ ಕಂಪನಿಯಿಂದ 5 ಲಕ್ಷ ವರ್ಗಾವಣೆ ಆಗಿದೆ.

ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆ ಆರ್‌ಎಫ್‌ಐನ 15 ಬ್ಯಾಂಕ್ ಖಾತೆಗಳಿಗೆ 2019-20ರ ನಡುವೆ 1 ಕೋಟಿಯಷ್ಟು ಹಣ ಮೊಬೈಲ್‌ಗಳಿಂದ ಐಎಂಪಿಎಸ್ ಆಗಿದೆ. ಯಾರಿಗೂ ಹಣದ ಮೂಲ ಗೊತ್ತಾಗದೇ ಇರಲಿ ಎಂಬ ಕಾರಣಕ್ಕೆ 5 ಸಾವಿರದಿಂದ 50 ಸಾವಿರ ರೂಪಾಯಿವರೆಗೂ ಹಣವನ್ನು ಐಎಂಪಿಎಸ್ ಮಾಡಲಾಗಿದೆ ಎಂಬುದು ತನಿಖಾ ಸಂಸ್ಥೆಗಳಿಂದ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.

ಈ ಸಂದರ್ಭದಲ್ಲಿಯೇ ಸಿಎಎ ವಿರೋಧಿ ಹೋರಾಟ ತೀವ್ರವಾಗಿತ್ತು. ಹೀಗಾಗಿ ಸಿಎಎ ವಿರೋಧಿ ಹೋರಾಟಗಳಿಗೆ ಪಿಎಫ್‌ಐ ಫಂಡಿಂಗ್ ಮಾಡಿರಬಹುದು ಎಂಬುದು ತನಿಖಾ ಸಂಸ್ಥೆಗಳ ಶಂಕೆಯಾಗಿದೆ. ಈ ಮಧ್ಯೆ ಪಿಎಫ್‌ಐ ಬ್ಯಾನ್‌ಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ಒತ್ತಾಯಿಸಿದ್ದಾರೆ. ಆದ್ರೆ, ತಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿರೋದಕ್ಕೆ ಪಿಎಫ್‌ಐ ಆಕ್ರೋಶ ಹೊರಹಾಕಿದೆ. ಇದೆಲ್ಲಾ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದೆ.

Leave A Reply

Your email address will not be published.