ಉಪ್ಪಿನಂಗಡಿ:ಕಾಲೇಜಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆ ಪ್ರಕರಣ!! ಉಪ್ಪಿನಂಗಡಿ ಠಾಣೆಯಲ್ಲಿ 25 ವಿದ್ಯಾರ್ಥಿಗಳ ಮೇಲೆ ಎಫ್.ಐ.ಆರ್ ದಾಖಲು
ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ಇಲ್ಲದಿದ್ದರೂ ಹಿಜಾಬ್ ಗಾಗಿ ಪಟ್ಟು ಹಿಡಿದ ಆರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಿದ ಬೆನ್ನಲ್ಲೇ ನಡೆದ ಪ್ರತಿಭಟನೆಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಾಲೇಜಿನ ಸುಮಾರು 25 ವಿದ್ಯಾರ್ಥಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ವರದಿಗೆ ತೆರಳಿದ್ದ ವರದಿಗಾರರನ್ನು ತಡೆದ ಮುಸ್ಲಿಂ ವಿದ್ಯಾರ್ಥಿಗಳು ಗೂಂಡಾಗಿರಿ ಮೆರೆದಿದ್ದು, ಹಲ್ಲೆ ನಡೆಸಿ ಕ್ಯಾಮರ ಕಸಿದುಕೊಂಡು ವೀಡಿಯೋ ಡಿಲೀಟ್ ಮಾಡಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯ ವರದಿಗಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಐ.ಪಿ.ಸಿ ಸೆಕ್ಷನ್ 143,323,342,506,149ರಡಿಯಲ್ಲಿ 25 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳಿಗಿತ್ತೇ ಮತೀಯ ಸಂಘಟನೆಗಳ ಪ್ರಚೋದನೆ!?
ನಿನ್ನೆ ನಡೆದ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀರಾ ಆಕ್ರೋಶ ವ್ಯಕ್ತವಾಗಿದ್ದು, ವಿದ್ಯೆಗೆಂದು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಈ ರೀತಿಯ ಗೂಂಡಾಗಿರಿ ವರ್ತನೆ ನಡೆಸಲು ಕೆಲವೊಂದು ಮತೀಯ ಸಂಘಟನೆಗಳ ಪ್ರಚೋದನೆ ಇದೆ. ಇಂತಹ ವರ್ತನೆ ತೋರುವ ವಿದ್ಯಾರ್ಥಿಗಳನ್ನು ಈಗಲೇ ಕಾನೂನಿನ ಚೌಕಟ್ಟಿಗೆ ತಂದು ಕಾನೂನು ಏನೆಂಬುವುದನ್ನು ಅರ್ಥ ಮಾಡಿಸದೇ ಇದ್ದಲ್ಲಿ ಮುಂದೆ ದೇಶದ್ರೋಹದ ಕೃತ್ಯಕ್ಕೆ ,ಕಾನೂನು ಉಲ್ಲಂಘಿನೆ ನಡೆಸಲೂ ಆರೋಪಿಗಳು ಹಿಂದೆ ಸರಿಯುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.