Home latest ಮಹಿಳೆಯರ ನೈಟಿ ಧರಿಸಿ ಕಳ್ಳತನ ಮಾಡಲೆತ್ನಿಸಿದ ಚಾಲಾಕಿ ಕಳ್ಳರು !!!

ಮಹಿಳೆಯರ ನೈಟಿ ಧರಿಸಿ ಕಳ್ಳತನ ಮಾಡಲೆತ್ನಿಸಿದ ಚಾಲಾಕಿ ಕಳ್ಳರು !!!

Hindu neighbor gifts plot of land

Hindu neighbour gifts land to Muslim journalist

‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬ ಮಾತಿದೆ. ಆದರೆ ಇಲ್ಲಿ ಸಾಲ ನಿಮಿತ್ತಂ ಗೋಸ್ಕರ ಬಹುಕೃತ ವೇಷ ತೊಟ್ಟಿದ್ದಾರೆ ಖದೀಮರು‌.

ಹೌದು, ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾಗರಾಜ್, ಆಟೋ ಚಾಲಕ ಕುಮಾರ್, ಬಸ್ ಚಾಲಕ ಬಹದ್ದೂರ್ ಸಿಂಗ್ ಬಂಧಿತ ಆರೋಪಿಗಳು. ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ ಮಣಪ್ಪುರಂ ಫೈನಾನ್ಸ್ ಕಂಪನಿ ದೋಚಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ಈ ಮೂವರು ಮೈತುಂಬಾ ಸಾಲ ಮಾಡಿಕೊಂಡಿದ್ದು, ಹೇಗಾದರೂ ಮಾಡಿ ಸಾಲ ತೀರಿಸಬೇಕೆಂದು ನಿರ್ಧರಿಸಿದ್ದರು. ಈ ಹಿನ್ನೆಲೆ ರಾಜಗೋಪಾಲನಗರದಲ್ಲಿರುವ ಮಣ್ಣಪುರಂ ಫೈನಾನ್ಸ್ ದೋಚಲು ಪ್ಲಾನ್ ಮಾಡಿದ್ದರು.

ಪ್ಲಾನ್ ಮಾಡಿದ ಪ್ರಕಾರ ಕಳೆದ 25ರ ರಾತ್ರಿ 8 ಗಂಟೆ ಸುಮಾರಿಗೆ ಫೈನಾನ್ಸ್ ಕಂಪನಿ ಒಳನುಗ್ಗಿದರು. ಆದರೆ ಗ್ಯಾಸ್ ಕಟ್ಟರ್ ನಿಂದ ಲಾಕರ್ ನ ಓಪನ್ ಮಾಡುವಷ್ಟರಲ್ಲಿ ಸೈರನ್ ಮೊಳಗಿತ್ತು. ಈ ಹಿನ್ನೆಲೆ ಮೂವರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಘಟನೆ ಬೆಳಕಿಗೆ ಬಂದ ತಕ್ಷಣ ಫೈನಾನ್ಸ್ ಕಂಪನಿಯವರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಸದ್ಯ ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು ಮೂವರನ್ನು ಬಂಧಿಸಿ ಆರು ಕೆಜಿ ಗ್ಯಾಸ್ ಸಿಲಿಂಡರ್,ಆಟೋರಿಕ್ಷಾ, 2 ನೈಟಿ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಆರೋಪಿಗಳು ಕಳೆದ ಎಪ್ರಿಲ್ ನಲ್ಲಿ ಎಟಿಎಂ ಸೆಂಟರ್ ಗೂ ಕನ್ನ ಹಾಕಿ ವಿಫಲರಾಗಿದ್ರೂ. ವಿಚಿತ್ರವೆಂದರೆ ತಮ್ಮ ಚಹರೆ ಗೊತ್ತಾಗಬಾರದು ಅಂತಾ ಆರೋಪಿಗಳು ನೈಟಿ ಧರಿಸಿ ಕೃತ್ಯವೆಸಗುತ್ತಿದ್ದರು ಎಂಬುದು ಗೊತ್ತಾಗಿದೆ.