Home News ಬೆಳಗಾವಿ : ಜಗಳದ ಮಧ್ಯೆ ಹೆಂಡತಿಗೆ ಹೊಡೆದ ಕಾರಣ ಪ್ರಜ್ಞೆ ತಪ್ಪಿದ ಪತ್ನಿ | ಆಕೆ...

ಬೆಳಗಾವಿ : ಜಗಳದ ಮಧ್ಯೆ ಹೆಂಡತಿಗೆ ಹೊಡೆದ ಕಾರಣ ಪ್ರಜ್ಞೆ ತಪ್ಪಿದ ಪತ್ನಿ | ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಪತಿ ಆತ್ಮಹತ್ಯೆಗೆ ಶರಣು

Hindu neighbor gifts plot of land

Hindu neighbour gifts land to Muslim journalist

ಮೂಡಲಗಿ: ಜಗಳದ ಮಧ್ಯೆ ಪತಿ ಪತ್ನಿಗೆ ಹೊಡೆದಿದ್ದು, ಈ ವೇಳೆ ಪತ್ನಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ತಾನು ಹೊಡೆದ ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದಲ್ಲಿ ಬುಧವಾರ ನಡೆದಿದೆ.

ನಾಗನೂರು ಪಟ್ಟಣದ ಅರಣ್ಯಸಿದ್ದೇಶ್ವರ ತೋಟದ ನಿವಾಸಿ ಮಹಾಂತೇಶ ಸಿದ್ದಪ್ಪ ಗೂಡೆನ್ನವರ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ. ಬುಧವಾರ ದಂಪತಿ ನಡುವೆ ಜಗಳವಾಗಿದೆ. ಇದರಿಂದ ಹೆಂಡತಿಗೆ ಮಹಾಂತೇಶ ಹೊಡೆದಿದ್ದಾನೆ. ಆಗ ಪತ್ನಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಹೆಂಡತಿ ಕೆಳಗೆ ಬಿದ್ದಿದ್ದನ್ನು ನೋಡಿ ಅವಳು ಸಾವನ್ನಪ್ಪಿದ್ದಾಳೆ ಎಂಬ ಭಯದಲ್ಲಿ ಮನೆಯಲ್ಲಿರುವ ಗೋಡೆಯ ಗೂಟಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸ್‌ ಠಾಣೆಯ ಪಿಎಸ್‌ಐ ಎಚ್‌ ವೈ ಬಾಲದಂಡಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.