ವಿನಾಕಾರಣ ಟ್ರಾಫಿಕ್ ಪೊಲೀಸರು ವಾಹನ ತಡೆದು ನಿಲ್ಲಿಸುವಂತಿಲ್ಲ!

Share the Article

ರಸ್ತೆಯಲ್ಲಿ ಓಡಾಡುತ್ತಿರುವ ವಾಹನಗಳನ್ನು ವಿನಾಕಾರಣ ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸುವಂತಿಲ್ಲ. ಯಾವುದೇ ಕಾನೂನು, ಸಂಚಾರ ನಿಯಮ ಉಲ್ಲಂಘಿಸಿದರೆ ಮಾತ್ರ ಪೊಲೀಸರು ವಾಹನಗಳನ್ನು ತಡೆಯಬೇಕು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಕುರಿತು ಜನರು ಯಾವಾಗಲೂ ಆರೋಪ ಮಾಡುತ್ತಾರೆ. ದಂಡ ಕಟ್ಟುವ ವಿಚಾರದಲ್ಲಿ ಮಾತಿನ ಚಕಮಕಿ ಮಾಮೂಲಾಗಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ನಡೆದು ಮೃತಪಟ್ಟಿರುವ ಘಟನೆಗಳು ನಡೆದಿವೆ. ವಾಹನಗಳನ್ನು ತಡೆದು ದಾಖಲೆ ತೋರಿಸುವಂತೆ ವಿನಾಕಾರಣ ತಡೆಯುತ್ತಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ದೂರು ನೀಡಿದ್ದರು.

ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ಸ್ಪಷ್ಟನೆ ನೀಡಿದ್ದು, ವಿನಾಕಾರಣ ವಾಹನಗಳನ್ನು ತಡೆಯುವಂತಿಲ್ಲ. ಒಂದು ವೇಳೆ ಆ ರೀತಿ ಮಾಡುವ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.

Leave A Reply