Home Food ಪಟಾಕಿಯಂತೆ ಸಿಡಿಯುವ ಹಣ್ಣು! ಜನ ಆಸ್ಪತ್ರೆಗೆ ದಾಖಲು

ಪಟಾಕಿಯಂತೆ ಸಿಡಿಯುವ ಹಣ್ಣು! ಜನ ಆಸ್ಪತ್ರೆಗೆ ದಾಖಲು

Hindu neighbor gifts plot of land

Hindu neighbour gifts land to Muslim journalist

ಮಧ್ಯಪ್ರದೇಶದ ಬರ್ವಾನಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ಪಟಾಕಿಗಳಂತೆ ಸಿಡಿಯುವ ಹಣ್ಣುಗಳು ಇಲ್ಲಿ ಸಿಗುತ್ತವೆ. ಶನಿವಾರ ಈ ವಿಚಿತ್ರ ಮರದ ಹಣ್ಣು ಪಟಾಕಿಯಂತೆ ಸಿಡಿದಿದೆಯಂತೆ. ಇದರಿಂದ ವ್ಯಕ್ತಿಯೊಬ್ಬರು ಗಾಯಗೊಂಡು, ಆಸ್ಪತ್ರೆ ಸೇರಿರುವ ಬಗ್ಗೆ ವರದಿಯಾಗಿದೆ.

ಬರ್ವಾನಿ ಎಂಬ ಪ್ರದೇಶದ ಕಾಡಿನಲ್ಲಿ  ಮರವೊಂದು ವಿಚಿತ್ರ ಹಣ್ಣು ಬಿಟ್ಟಿದೆಯಂತೆ. ಈ ಮರದ ಹಣ್ಣುಗಳು ಪಟಾಕಿಯಂತೆ  ಸಿಡಿಯುತ್ತಿದೆಯಂತೆ. ಈ ಹಣ್ಣಿನ ಸಿಡಿತದಿಂದ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿರುವ ಬಗ್ಗೆಯೂ ವರದಿಯಾಗಿದೆ. 

ಬರ್ವಾನಿಯಲ್ಲಿರುವ ಪಲ್ಸೂಡ್‌ನಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಈ ಹಣ್ಣುಗಳನ್ನು ನೆಲಕ್ಕೆ ಎಸೆದು ಸ್ಫೋಟಿಸುತ್ತಿದೆ. ಘಟನೆಯ ತನಿಖೆಗೆ ಪೊಲೀಸರು, ಅರಣ್ಯಾಧಿಕಾರಿಗಳು ಇಲ್ಲಿಗೆ ಬಂದು ಪರೀಕ್ಷೆ ಮಾಡಿದ್ದಾರಂತೆ.

ಪ್ರಯೋಗ ಮಾಡಲು ಪೊಲೀಸರು ಹಣ್ಣನ್ನು ನೆಲದ ಮೇಲೆ ಎಸೆದರು. ಅದು ನೆಲದ ಮೇಲೆ ಬಿದ್ದಾಗ ಸ್ಫೋಟಗೊಂಡಿತು. ನಂತರ ಪೊಲೀಸರು ಹಣ್ಣಿನ ಮಾದರಿಗಳನ್ನು ತೆಗೆದುಕೊಂಡರು. ಮತ್ತೊಂದೆಡೆ ಅರಣ್ಯ ಇಲಾಖೆ ತಂಡ ಕೂಡ ಸ್ಥಳ ಪರಿಶೀಲನೆ ನಡೆಸಿ ಹಣ್ಣಿನ ಮಾದರಿ ತೆಗೆದುಕೊಂಡಿದೆ. ಸದ್ಯ ಈ ಮರದ ವಿಚಿತ್ರ ಹಣ್ಣಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಲ್ಲಿ ಹಣ್ಣಿನ ಪರೀಕ್ಷೆ ನಡೆಯಲಿದೆ.