ಸರಕಾರದಿಂದ ಬರುವ ಎಲ್ಲಾ ಅನುದಾನಗಳು ಕಾರ್ಮಿಕರಿಗೆ ತಲುಪಬೇಕು: ಶಾಸಕ ಎಸ್ ರಾಮಪ್ಪ

Share the Article

ದಾವಣಗೆರೆ ಜಿಲ್ಲೆಯ ಹರಿಹರ ಬ್ಲಾಕ್ ಕಾಂಗ್ರೇಸ್ ನ ಕಾರ್ಮಿಕ ವಿಭಾಗದಿಂದ ಹರಿಹರದ ಜನ ಪ್ರಿಯ ಶಾಸಕರಾದ ಎಸ್. ರಾಮಪ್ಪ ರವರ ನೇತೃತ್ವದಲ್ಲಿ ಇಂದು ಕಾರ್ಮಿಕ ದಿನಾಚರಣೆಯನ್ನು ಹಾಗೂ ಆರೋಗ್ಯ ತಪಪಾಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಎಸ್ ,ರಾಮಪ್ಪನವರು ಈ ಭಾಗವು ಅತಿ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವಂತ ಪ್ರದೇಶವಾಗಿದ್ದು ಸರಕಾರದಿಂದ ಬರುವಂತ ಎಲ್ಲಾ ಅನುದಾನಗಳು ಕಾರ್ಮಿಕರಿಗೆ ತಲುಪುವ ಕೆಲಸವನ್ನು ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್ ಬಿ ಮಂಜಪ್ಪ .ಕೆ.ಪಿ. ಸಿಸಿ ವಕ್ತಾರರಾದ ಡಿ ಬಸವರಾಜ್ .ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷರಾದ ಪುಟ್ಟಸ್ವಾಮಿಗೌಡ್ರು, ಜಿಲ್ಲಾ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಸುಭಾನ್ ಸಾಬ್, ಯುವ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷರಾದ ನಿಖಿಲ್ ಕೊಂಡಜ್ಜಿ, ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿಯಾದ ರುದ್ರೇಶ್ ಗುತ್ತಿದುರ್ಗ, ಜಗಳೂರು ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾದ ಪಿ ರೇವಣ್ಣ ಮುಂತಾದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

.https://chat.whatsapp.com/I1ouCXvzqh7AtRaFLwgKXh

Leave A Reply