ಕೃಷಿಕರಿಗೆ ಸಿಹಿ ಸುದ್ದಿ !! | ರಾಜ್ಯ ಸರ್ಕಾರದಿಂದ “ಕೃಷಿ ಪಂಡಿತ” ಪ್ರಶಸ್ತಿಗೆ ಅರ್ಜಿ ಆಹ್ವಾನ

ಸರ್ಕಾರ ಕೃಷಿಕರಿಗೆ ಒಂದಲ್ಲಾ ಒಂದು ಯೋಜನೆಗಳನ್ನು ಘೋಷಿಸಿ ಕೃಷಿ ಸಮುದಾಯವನ್ನು ಉನ್ನತ ಹಂತಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಅಂತೆಯೇ ಇದೀಗ ಪರಿಣಿತ ರೈತರನ್ನು ಪುರಸ್ಕರಿಸಲು ಕರ್ನಾಟಕ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಕೃಷಿ ಕ್ಷೇತ್ರದಲ್ಲಿ ಸೃಜನಾತ್ಮಕತೆ, ಆಧುನಿಕತೆ ಮುಂತಾದವುಗಳನ್ನು ರೂಢಿಸಿಕೊಳ್ಳುವ ಮೂಲಕ ಹೊಸ ರೀತಿಯಲ್ಲಿ ಕೃಷಿ ಮಾಡುವ ಹಲವು ರೈತರನ್ನು ನಾವು ಕಾಣುತ್ತೇವೆ. ಅಂತಹ ಪ್ರಗತಿಪರ ಕೃಷಿಕರು ತಮ್ಮ ಜೊತೆ ಇತರರನ್ನೂ ಅಭಿವೃದ್ಧಿಯ ಹಾದಿಯಲ್ಲಿ ಕರೆದೊಯ್ಯುತ್ತಾರೆ. ಇಂತಹ ಸೃಜನಶೀಲ ಅತ್ಯುತ್ತಮ ಕೃಷಿಕರನ್ನು ಗೌರವಿಸಲು ಎಂದೇ ಕರ್ನಾಟಕ ಸರ್ಕಾರ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಸರ್ಕಾರವು ಕೊಡಮಾಡುವ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಹಾಕಲು ಇಚ್ಛಿಸಿರುವವರು ಕೃಷಿ ಕ್ಷೇತ್ರದಲ್ಲಿ ವಿನೂತನ ಸಾಧನೆ ಮಾಡಿರಬೇಕು. ಆಧುನಿಕ ಕೃಷಿಯನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರಬೇಕು. ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ಉತ್ತಮ ಕೃಷಿಕರಾಗಿರಬೇಕು. ಕೃಷಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆ ಮಾಡಿರುವ ಕೃಷಿಕರಾದರೆ ಅತ್ಯುತ್ತಮ. ಕೃಷಿ ಸಂಶೋಧನೆ, ಅನ್ವೇಷಣೆ ಮಾಡಿದ ರೈತರಿಗೆ ಈ ಪ್ರಶಸ್ತಿಗೆ ಸರ್ಕಾರ ನೀಡುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅಷ್ಟೇ ಅಲ್ಲದೇ ಇನ್ನಷ್ಟು ಮುಖ್ಯವಾಗಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಈಗಾಗಲೇ ನಿಗದಿಪಡಿಸಿರುವ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೃಷಿ ಇಲಾಖೆ ನಿಗದಿಪಡಿಸಿರುವ ಅಂತಿಮ ದಿನಾಂಕದ ಒಳಗೆ ಅರ್ಜಿಯನ್ನು ನಿಮ್ಮ ತಾಲೂಕಿನ ಕೃಷಿ ಇಲಾಖೆಯ ಕಚೇರಿಗೆ ಸಲ್ಲಿಸಬೇಕು.

ಪ್ರಶಸ್ತಿಯ ವಿವರಗಳು ಹೀಗಿವೆ

ಕೃಷಿ ಪಂಡಿತ ಪ್ರಶಸ್ತಿಗೆ ಪುರಸ್ಕಾರವಾಗಿ ಕರ್ನಾಟಕ ಸರ್ಕಾರವು ಉತ್ತಮ ಮೊತ್ತವನ್ನೇ ನೀಡಿ ಗೌರವಿಸುತ್ತಿದೆ.
*ಕೃಷಿ ಪಂಡಿತ –ಪ್ರಥಮ ಬಹುಮಾನ – 1,25,000
*ಕೃಷಿ ಪಂಡಿತ-ದ್ವಿತೀಯ ಬಹುಮಾನ – 1,00,000
*ಕೃಷಿ ಪಂಡಿತ-ತೃತೀಯ ಬಹುಮಾನ – 75,000
*ಕೃಷಿ ಪಂಡಿತ ಉದಯೋನ್ಮುಖ ಬಹುಮಾನ – ತಲಾ 50,000.

ಹೀಗಿವೆ ನಿಯಮಗಳು

ಇನ್ನೊಂದು ಮಹತ್ವದ ವಿಚಾರವೆಂದರೆ ಕೇಂದ್ರ ಅಥವಾ ಕರ್ನಾಟಕ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆಯ, ಅಥವಾ ವಿಶ್ವವಿದ್ಯಾಲಯದ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಹಾಕುವಂತಿಲ್ಲ. ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಸ್ವಯಂ ಬೇಸಾಯ ಮಾಡುತ್ತಿರಬೇಕು. ಪ್ರಸ್ತುತ ಕೃಷಿಯನ್ನೇ ಮಾಡುತ್ತಿರಬೇಕು.

ಕೃಷಿ ಪಂಡಿತ ಅಥವಾ ಕೃಷಿ ಪ್ರಶಸ್ತಿಗೆ ಅರ್ಜಿ ಹಾಕುವವರು ಸ್ವಂತ ಜಮೀನು ಹೊಂದಿರಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಸಹಭಾಗಿತ್ವ ಅಥವಾ ಸಮುದಾಯದ ಜೊತೆಗೂಡಿ ಕೃಷಿ ಮಾಡುತ್ತಿರುವ ಕೃಷಿಕರು ಸಹ ಈ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಕರ್ನಾಟಕ ಸರ್ಕಾರ ಕೊಡಮಾಡುವ ಕೃಷಿ ಪಂಡಿತ ಪ್ರಶಸ್ತಿಯನ್ನು ಈ ಹಿಂದೆ ಒಮ್ಮೆ ಪಡೆದ ಯಾರೂ ಇನ್ನೊಮ್ಮೆ ಅರ್ಜಿ ಹಾಕುವಂತಿಲ್ಲ ಎಂಬ ನಿಯಮವಿದೆ ನೆನಪಿಡಿ.

Leave A Reply

Your email address will not be published.