ಮದುವೆ ಸಮಾರಂಭವೊಂದರಲ್ಲಿ ಡ್ಯಾನ್ಸರ್ ಗಳ ಮೇಲೆ ಹಣ ಚೆಲ್ಲಿ ಕುಣಿದು ಕುಪ್ಪಳಿಸಿದ ಗ್ರಾಮ ಪಂಚಾಯತ್ ಸದಸ್ಯರು !! | ಯುವತಿಯರೊಂದಿಗೆ ಅಸಹ್ಯವಾಗಿ ಸ್ಟೆಪ್ ಹಾಕಿರುವ ಫೋಟೋಗಳು ವೈರಲ್

Share the Article

ಮದುವೆ ಸಮಾರಂಭವೊಂದರಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹುಚ್ಚಾಟ ಮೆರೆದಿದ್ದು, ಎಲ್ಲರೆದುರು ಯುವತಿಯರ ಮೈ ಕೈ ಮುಟ್ಟಿಕೊಂಡು ಅಸಹ್ಯವಾಗಿ ಕುಣಿದು ಕುಪ್ಪಳಿಸಿದ ಘಟನೆ ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಸಂಬಂಧಿ ಮದುವೆಯಲ್ಲಿ ಮೈಚಳಿ ಬಿಟ್ಟು ಸದಸ್ಯರು ಕುಣಿದು ಕುಪ್ಪಳಿಸಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ. ಬಾಯದೊಡ್ಡಿ, ಕುರುಬದೊಡ್ಡಿ, ಗೌಸನಗರ, ಕಡಗಂದೊಡ್ಡಿ, ವಡವಟ್ಟಿ ಗ್ರಾಮ ಪಂಚಾಯತ್‍ನ ಸದಸ್ಯರು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ.

ಮೇ 26 ರಂದು ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್‍ನಿಂದ ನೃತ್ಯ ಮಾಡಲು ಯುವತಿಯರನ್ನು ಕರೆಸಲಾಗಿತ್ತು. ಈ ವೇಳೆ ಜನಪ್ರತಿನಿಧಿಗಳು ಎಂಬುವುದನ್ನು ಮರೆತು ಯುವತಿಯರ ಮೇಲೆ ಹಣ ಎಸೆದು ನೃತ್ಯ ಮಾಡಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply