ಕೊಕ್ಕಡ: ಆಟೋ ಚಾಲಕನ ಲವ್ ಜಿಹಾದ್ ಪ್ರಕರಣ!! ಆಟೋ ನಿಲ್ದಾಣದಲ್ಲೇ ಇತ್ತಂಡಗಳ ಮಧ್ಯೆ ಮಾರಾಮಾರಿ!!

Share the Article

ಬೆಳ್ತಂಗಡಿ: ತಾಲೂಕಿನ ಕೊಕ್ಕಡದ ಮುಸ್ಲಿಂ ಆಟೋ ಡ್ರೈವರ್ ಒಬ್ಬ, ಈ ಹಿಂದೆ ಕೊಕ್ಕಡದ ಸೌತಡ್ಕ ದೇವಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ ಹಿಂದೂ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು,ಪ್ರೀತಿಸಿ ಮದುವೆಯಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಬೆನ್ನಲ್ಲೇ ಇಂದು ಕೊಕ್ಕಡದಲ್ಲಿ ಪ್ರವಾಸಿ ಭಕ್ತರು ಹಾಗೂ ಸ್ಥಳೀಯ ಮುಸ್ಲಿಂ ಆಟೋ ಚಾಲಕರ ನಡುವೆ ಹೊಯ್-ಕೈ ನಡೆದಿದ್ದು, ಸ್ಥಳೀಯರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ ಬಗ್ಗೆ ವರದಿಯಾಗಿದೆ.

ಕೊಕ್ಕಡದಲ್ಲಿ ಆಟೋ ಚಾಲಕನಾಗಿದ್ದ ಮುಸ್ಲಿಂ ಯುವಕ ಸಮೀರ್(27) ಎಂಬಾತ ಬೆಂಗಳೂರಿನ ಹಿಂದೂ ಯುವತಿ ಬಸಮ್ಮ ರಕ್ಕಸಗಿ(22) ಎಂಬಾಕೆಯನ್ನು ಮೇ ತಿಂಗಳಿನಲ್ಲಿ ರಿಜಿಸ್ಟರ್ ಮದುವೆಯಾದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಹರಿದಾಡಿದ್ದು, ಇದೊಂದು ಲವ್ ಜಿಹಾದ್ ಷಡ್ಯಂತ್ರ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

ಆದರೆ ಇಂದು ಕೊಕ್ಕಡದ ಇನ್ನೋರ್ವ ಮುಸ್ಲಿಂ ಆಟೋ ಚಾಲಕ ಅದೇ ಚಾಳಿ ಮುಂದುವರಿಸಿದ್ದ.ಪ್ರವಾಸಿ ಭಕ್ತರ ಬಳಿ, ಅದರಲ್ಲೂ ಮಹಿಳೆಯರು-ಯುವತಿಯರ ಮೊಬೈಲ್ ನಂಬರ್ ಕೇಳಿ ಪಡೆಯುತ್ತಿದ್ದ ಎಂದು ದೂರಲಾಗಿದೆ.ಈ ವೇಳೆ ಉಳಿದ ಪ್ರವಾಸಿ ಭಕ್ತರು ಆತನನ್ನು ವಿಚಾರಿಸಿದ್ದು, ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಒಂದಿಬ್ಬರು ಮುಸ್ಲಿಂ ಆಟೋ ಚಾಲಕರ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ.ಅಲ್ಲಿಗೆ ಶಾಂತವಾಗಿದ್ದ ವಾತಾವರಣ ಹದಗೆಟ್ಟಿದ್ದು,ಮುಂದುವರಿದ ಭಾಗವಾಗಿ ಕೊಕ್ಕಡದ ಸ್ಥಳೀಯ ಮುಸ್ಲಿಂ ಪುಂಡರು ಗ್ಯಾಂಗ್ ಕಟ್ಟಿಕೊಂಡು ಬಂದು ಸ್ಥಳೀಯ ಹಿಂದೂ ಆಟೋ ಚಾಲಕರನ್ನು ಹಾಗೂ ಪ್ರವಾಸಿ ಭಕ್ತರನ್ನು ಅಡ್ಡಗಟ್ಟಿ ಹಲ್ಲೆಗೆ ಮುಂದಾದರು.

ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು,ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ತಿಳಿದುಬಂದಿದೆ.ಒಟ್ಟಿನಲ್ಲಿ ಒಂದು ಕ್ಷಣ ಕೊಕ್ಕಡ ಪೇಟೆಯೇ ಉದ್ವಿಗ್ನ ಪರಿಸ್ಥಿತಿಯತ್ತ ತಲುಪಿದ್ದು, ಸ್ಥಳೀಯರ ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರಕಿದಂತಾಗಿದೆ.

Leave A Reply