ಮಂಗಳೂರು : ದರ್ಗಾ ಕೆಡಹಿದಾಗ ಗುಡಿ ಪತ್ತೆ ಪ್ರಕರಣ| “ಅದು ದೈವ ಸಾನಿಧ್ಯದ ಸ್ಥಳ, ಇದರಲ್ಲಿ ಯಾವುದೇ ಅನುಮಾನವಿಲ್ಲ” – ತಾಂಬೂಲ ಪ್ರಶ್ನೆ ವೇಳೆ ಹೇಳಿಕೆ ನೀಡಿದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್
ಮಂಗಳೂರು : ವಿವಾದಿತ ಸ್ಥಳ ಅದು ದೈವ ಸಾನಿಧ್ಯ ಇದ್ದ ಭೂಮಿ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಎಂದು ಮಂಗಳೂರಿನ ಹೊರವಲಯ ತೆಂಕ ಉಳಿಪಾಡಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ಆರಂಭಗೊಂಡಿರುವ ತಾಂಬೂಲ ಪ್ರಶ್ನೆಯ ವೇಳೆ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.
ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೂಬಸ್ ನಲ್ಲಿ ತಾಂಬೂಲ ಪ್ರಶ್ನೆ ಬುಧವಾರ ಬೆಳಿಗ್ಗೆ ಆರಂಭಗೊಂಡಿದೆ.
ಸಾಮಾನ್ಯ ತಾಂಬೂಲ ಶಾಸ್ತ್ರಚಿಂತನೆ ಮೂಲಕ ಯಾವ ದೈವ ಸಾನಿಧ್ಯ ಅಂತಾ ಹೇಳಲು ಸಾಧ್ಯವಿಲ್ಲ. ದೇವಾಲಯ ಇತ್ತಾ? ದೈವಸ್ಥಾನ ಇತ್ತಾ? ಅನ್ನೋದನ್ನು ಮುಂದೆ ಚಿಂತಿಸಬೇಕಿದೆ.ಮಠ, ಆ ಸ್ಥಳದಲ್ಲಿ ಆರಾಧನೆ ನಡೆಯುತ್ತಿದ್ದ ಬಗ್ಗೆ ಕಂಡುಬರುತ್ತಿದೆ. ಪೂರ್ಣ ಚೈತನ್ಯ ಇದ್ದ ಬಗ್ಗೆ ಲಕ್ಷಣ ಕಾಣುತ್ತಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ನಿಷ್ಕರ್ಷೆಯನ್ನು ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ವಿವರಿಸಿದರು.
ಅದು ದೈವ ಸಾನಿಧ್ಯ ಇದ್ದ ಭೂಮಿ ಇದರಲ್ಲಿ ಯಾವುದೇ ಅನುಮಾನ ಇಲ್ಲ. ಸಾನಿಧ್ಯ ಸಂಪೂರ್ಣ ವಾಗಿ ನಾಶ ಆಗಿಲ್ಲ.ಸಾನಿಧ್ಯದ ಅರ್ಧ ಚಿಂತನೆ ಅಲ್ಲೇ ಇದೆ. ಪೂರ್ವ ಕಾಲದಲ್ಲಿ ಮಠದ ರೀತಿಯ ಪ್ರದೇಶ ಆದಾಗಿತ್ತು. ಮಠ ನಾಶ ಆಗಲು ಜೀವ ಹಾನಿಯಾಗಿರೋದು ಕಾರಣ ವಾಗಿರಬಹುದು, ದೋಷಗಳಿಗೆ ಪರಿಹಾರ ಆಗಬೇಕಿದೆ ಎಂದು ತಾಂಬೂಲ ಪ್ರಶ್ನೆ ವೇಳೆ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.
ಕೇರಳದ ಜ್ಯೋತಿಷಿ ಪೊದುವಾಳ್ ಜಿ.ಪಿ ಗೋಪಾಲಕೃಷ್ಣ ಪಣಿಕ್ಕರ್ ತಾಂಬೂಲ ಪ್ರಶ್ನೆಯ ನೇತೃತ್ವ ವಹಿಸಿದ್ದಾರೆ. ತಾಂಬೂಲ ಪ್ರಶ್ನಾ ಚಿಂತನೆ ಯಜಮಾನಿಕೆಯನ್ನು ಮಳಲಿಯ ಉಳಿಪ್ಪಾಡಿ ಗುತ್ತು ಮನೆತನದ ಉದಯ ಕುಮಾರ್ ಶೆಟ್ಟಿ ವಹಿಸಿಕೊಂಡಿದ್ದಾರೆ. ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರಿಗೆ ಉದಯ ಕುಮಾರ್ ಅವರು ತಾಂಬೂಲ ನೀಡಿದ್ದು ಬಳಿಕ ತಾಂಬೂಲ ಪ್ರಶ್ನೆ ಆರಂಭಗೊಂಡಿತ್ತು.