Home latest ಶಾಲಾ ಬಾಲಕಿಗೆ ಮನಬಂದಂತೆ ಕಾಲಿನಿಂದ ಒದೆಯುತ್ತಿರುವ ಯುವಕ | ಎಲ್ಲೆಡೆ ಆಕ್ರೋಶ, ಆರೋಪಿ ಅಂದರ್!!!

ಶಾಲಾ ಬಾಲಕಿಗೆ ಮನಬಂದಂತೆ ಕಾಲಿನಿಂದ ಒದೆಯುತ್ತಿರುವ ಯುವಕ | ಎಲ್ಲೆಡೆ ಆಕ್ರೋಶ, ಆರೋಪಿ ಅಂದರ್!!!

Hindu neighbor gifts plot of land

Hindu neighbour gifts land to Muslim journalist

ಶಾಲಾ ಸಮವಸ್ತ್ರದಲ್ಲಿದ್ದ ಹುಡುಗಿಯೊಬ್ಬಳನ್ನು ಯುವಕನೊಬ್ಬ ಮನಬಂದಂತೆ ಕಾಲಿಂದ ಒದೆಯುತ್ತಿರುವ ಆಘಾತಕಾರಿ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಾಲಕಿಗೆ ಥಳಿಸುವ ದೃಶ್ಯ ಕಂಡು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ಜಾರ್ಖಂಡ್‌ನ ಪಾಕುರ್‌ನಲ್ಲಿ ನಡೆದಿದ್ದು, ಇದೀಗ ಇದರ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೀಡಿಯೋ ವೈರಲ್ ಆದ ಕೂಡಲೇ ಪೊಲೀಸರು ತಕ್ಷಣ ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿಯು 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ದುಮ್ಮಾ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.

ಮೇಲ್ನೋಟಕ್ಕೆ ಇದೊಂದು ಪ್ರೇಮ ಪ್ರಕರಣ ಎಂದು ತೋರುತ್ತದೆ ಎಂದು ದುಮ್ಮಾ ಉಪವಿಭಾಗದ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ನೂರ್ ಮುಸ್ತಫಾ ಅನ್ಸಾರಿ ಹೇಳಿದ್ದಾರೆ. ಈ ಘಟನೆಯು ಹದಿನೈದು ದಿನಗಳ ಹಿಂದೆ ಸಂಭವಿಸಿದೆ. ಆದರೆ, ವೀಡಿಯೊ ಇತ್ತೀಚೆಗೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ವಿಡಿಯೋದಲ್ಲಿರುವ ಹುಡುಗ ಮತ್ತು ಹುಡುಗಿ ಇಬ್ಬರೂ ಬುಡಕಟ್ಟು ಸಮುದಾಯದವರಾಗಿದ್ದಾರೆ. ಅವರನ್ನು ವಿಚಾರಣೆಗಾಗಿ ಗೋಪಿಕಂದರ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಹುಡುಗ ಅಪ್ರಾಪ್ತನಾಗಿರುವುದರಿಂದ ಅವನನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.