Home News ರಾಷ್ಟ್ರ ಧ್ವಜದ ಮೇಲೆ ನಿಂತು ನಮಾಜ್ !! | ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಬಂಧನ

ರಾಷ್ಟ್ರ ಧ್ವಜದ ಮೇಲೆ ನಿಂತು ನಮಾಜ್ !! | ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಬಂಧನ

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರಧ್ವಜಕ್ಕೆ ಅದರದ್ದೇ ಆದ ಗೌರವವಿದೆ. ಅದರ ಗೌರವಕ್ಕೆ ಚ್ಯುತಿ ತಂದರೆ ಅದು ಅಪರಾಧ. ಇಂತಹ ಮಹಾಪರಾಧವನ್ನು ಅಸ್ಸಾಂನ ವ್ಯಕ್ತಿಯೊಬ್ಬ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಷ್ಟ್ರಧ್ವಜದ ಮೇಲೆಯೇ ನಿಂತು ನಮಾಜ್ ಮಾಡಿದ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ.

ಮೊಹಮ್ಮದ್ ತಾರಿಕ್ ಅಜೀಜ್ ಬಂಧಿತ ವ್ಯಕ್ತಿ. ಅಸ್ಸಾಂನ ದಿಮಾಪುರ್ ನಿವಾಸಿ ಮೊಹಮ್ಮದ್ ತಾರಿಕ್ ದುಬೈನಿಂದ ವಿಮಾನದಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಅಲ್ಲಿಂದ ಅಸ್ಸಾಂಗೆ ಹಿಂತಿರುಗುತ್ತಿದ್ದ. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮೊಹಮ್ಮದ್ ತಾರಿಕ್ ನೆಲದ ಮೇಲೆ ರಾಷ್ಟ್ರಧ್ವಜವನ್ನು ಇಟ್ಟು ನಮಾಜ್ ಮಾಡುತ್ತಿದ್ದುದನ್ನು ಸಿಐಎಸ್‍ಎಫ್ ಸೈನಿಕರು ನೋಡಿದ್ದಾರೆ. ಅನುಮಾನಾಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮೊಹಮ್ಮದ್ ತಾರಿಕ್ ಅವರನ್ನು ಸಿಐಎಸ್‍ಎಫ್ ವಶಕ್ಕೆ ಪಡೆದಿದ್ದು, ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

ಅಷ್ಟೇ ಅಲ್ಲದೇ ಮೊಹಮ್ಮದ್ ತಾರಿಕ್ ಅಜೀಜ್‍ನನ್ನು ಬಂಧಿಸಲಾಗಿದ್ದು, ಆತನ ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ಪ್ರಯಾಣ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ ಪೊಲೀಸರು ಸಿಸಿಟಿವಿಯನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಸಿಐಎಸ್‍ಎಫ್ ದೂರಿನ ಮೇರೆಗೆ ಮೊಹಮ್ಮದ್ ತಾರಿಕ್ ಅಜೀಜ್ ವಿರುದ್ಧ ರಾಷ್ಟ್ರೀಯ ಗೌರವದ ಅವಮಾನ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.