ಕುಕ್ಕೆ ಸುಬ್ರಹ್ಮಣ್ಯ: ಬೀದಿಗೆ ಬಂದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿಯ ಒಳಜಗಳ!! | ಅಧಿಕಾರಿಯನ್ನು ಎತ್ತಂಗಡಿ ನಡೆಸಲು ದೂರು-ಪ್ರತಿದೂರು

Share the Article

ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಡಳಿತ ಮಂಡಳಿ-ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳ ಒಳಜಗಳ ತಾರಕಕ್ಕೇರಿ ದೂರು-ಪ್ರತೀದೂರು ದಾಖಲಾಗುವುದರೊಂದಿಗೆ ಸುದ್ದಿಯಲ್ಲಿದ್ದು, ವಿಷಯ ಬೀದಿಗೆ ಬಂದಂತಾಗಿ ಹಲವು ರೀತಿಯ ಚರ್ಚೆಯೂ ಪ್ರಾರಂಭವಾಗಿದೆ.

ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರು ಕಾರ್ಯನಿರ್ವಹಣಾಧಿಕಾರಿಯವರ ಬಗ್ಗೆ ಸಚಿವರಾದ ಎಸ್. ಅಂಗಾರ ಹಾಗೂ ಶಶಿಕಲಾ ಜೊಲ್ಲೆಯವರಿಗೆ ದೂರೊಂದನ್ನು ನೀಡಿದ್ದು, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಅವರು ವಾರದಲ್ಲಿ ನಾಲ್ಕು ದಿನ ಕರ್ತವ್ಯಕ್ಕೆ ಹಾಜರಾಗುತ್ತಿದ್ದೂ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ. ಕಡತ ವಿಲೇವಾರಿ ಮಾಡಲು ತಡವರಿಸುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿಯ ಕಾರ್ಯ ಎಡವುತ್ತಿದೆ.ಹೀಗಾಗಿ ಓರ್ವ ಉತ್ತಮ ಅಧಿಕಾರಿಯನ್ನು ನೇಮಿಸಿ ಅದೇಶಿಸಬೇಕೆಂದು ಮನವಿ ಮಾಡಿದ್ದರು.

ಸುಳ್ಳಿ ಮಾಡಿದ್ದ ಆರೋಪವನ್ನು ತಳ್ಳಿ ಹಾಕಿರುವ ನಿಂಗಯ್ಯ ಕಳೆದ ಎರಡು ಮೂರು ತಿಂಗಳಿನಿಂದ ಈ ರೀತಿಯ ವಿರೋಧ ವ್ಯಕ್ತವಾಗುತ್ತಿದೆ. ಕಚೇರಿ ಕೆಲಸದ ನಿಮಿತ್ತ ಹೊರಗಡೆ ತೆರಳುತ್ತೇನೆ ಹೊರತು, ವಿನಃ ಕಾರಣ ಕ್ಷೇತ್ರ ಬಿಟ್ಟು ತೆರಳುವುದಿಲ್ಲ. ಕಚೇರಿ ಕೆಲಸ ದೇವರ ಕೆಲಸವೆಂದು ಭಾವಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.

ಸದ್ಯ ಕ್ಷೇತ್ರದ ಕಚೇರಿಯೊಳಗಿನ ವಿಚಾರವು ಬೀದಿಗೆ ಬಂದಿದ್ದು,ಸಾರ್ವಜನಿಕರು ಸಿಕ್ಕ ಸಿಕ್ಕ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕೇವಲ ಆಡಳಿತಾತ್ಮಕ ವಿಷಯಗಳ ಕುರಿತಾದ ಜಟಾಪಟಿ ಮಾತ್ರವಾ ಇದು, ಅಥವಾ ಇದರೊಳಗೆ ಬೇರೆ ವಿಷಯಗಳು ಇವೆಯಾ ಎಂಬ ಬಗ್ಗೆ ಸುಬ್ರಮಣ್ಯ ಸ್ವಾಮಿಗೇ ಗೊತ್ತು.

Leave A Reply

Your email address will not be published.