ಅಪರಿಚಿತ ವಾಹನ ಡಿಕ್ಕಿ-ಬೈಕ್ ಸವಾರ ಸ್ಥಳದಲ್ಲೇ ಮೃತ್ಯು!! | ಏಕೈಕ ಪುತ್ರನನ್ನು ಕಳೆದುಕೊಂಡು ಮುಗಿಲು ಮುಟ್ಟಿದ ಹೆತ್ತಬ್ಬೆಯ ಆಕ್ರಂದನ

Share the Article

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಮಡಿಕೇರಿ-ಸುಂಟಿಕೊಪ್ಪ ರಾಷ್ಟೀಯ ಹೆದ್ದಾರಿಯ ಚೈನ್ ಗೇಟ್ ಸಮೀಪ ನಡೆದಿದೆ.

ಮೃತ ಯುವಕನನ್ನು ಜೋಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತೇಜಸ್ ತಿಮ್ಮಯ್ಯ(28)ಎಂದು ಗುರುತಿಸಲಾಗಿದೆ.
ಯುವಕನು ಕೆಲಸದ ನಿಮಿತ್ತ ತನ್ನ ಬೈಕಿನಲ್ಲಿ ತೆರಳುತ್ತಿರುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದು, ಘಟನೆ ಬಳಿಕ ದಾರಿಹೋಕರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ತೇಜಸ್ ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದು, ಆತನ ದುಡಿಮೆಯಿಂದಲೇ ಬದುಕು ಸಾಗುತ್ತಿತ್ತು. ಆದರೆ ವಿಧಿಯಾಟ ಅಮಾಯಕನ ಉಸಿರನ್ನೇ ನಿಲ್ಲಿಸಿದ್ದು, ಮೃತನ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು.

Leave A Reply