SSLC ಫಲಿತಾಂಶ 2022: ಯಾವ ಜಿಲ್ಲೆಗೆ ಯಾವ ಗ್ರೇಡ್ ? ಈ ಗ್ರೇಡ್ ಮಾನದಂಡ ಈ ಬಾರಿ ಯಾಕೆ? ಇಲ್ಲಿದೆ ಉತ್ತರ!!!
ಅಂತೂ ಇಂತೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಪ್ರತಿ ಬಾರಿಯೂ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದವರು ಯಾರು ಎಂಬಿತ್ಯಾದಿ ಅಂಶವನ್ನು ಗಮನಿಸುತ್ತೇವೆ. ಅದೇ ರೀತಿಯಲ್ಲಿ ಯಾವ ಜಿಲ್ಲೆ ಪ್ರಥಮ, ಯಾವ ಜಿಲ್ಲೆ ಕೊನೆ ಎಂಬುದರ ಬಗ್ಗೆನೂ ಕುತೂಹಲದ ಜೊತೆ ಜೊತೆಗೂ ಪೈಪೋಟಿ ಕೂಡಾ ಇದೆ. ಆದರೆ ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗಳನ್ನು ಗ್ರೇಡ್ ವೈಸ್ ನಲ್ಲಿ ವಿಭಾಗ ಮಾಡಲಾಗಿದೆ.
ಶೈಕ್ಷಣಿಕ ಜಿಲ್ಲೆಗಳ ಲೆಕ್ಕಾಚಾರದಲ್ಲಿ ಕರ್ನಾಟಕದಲ್ಲಿ 34 ಶೈಕ್ಷಣಿಕ ಜಿಲ್ಲೆ ಎಂದು ಕರೆಯಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲೆಲ್ಲಾ ಉತ್ತೀರ್ಣದ ಶೇಕಡಾವಾರು ಲೆಕ್ಕಾಚಾರದಲ್ಲಿ ಸ್ಥಾನವನ್ನು ನಿಗದಿ ಮಾಡಲಾಗುತ್ತಿತ್ತು.
ಹಾಗಾಗಿ ಪ್ರತಿ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಅನುತ್ತೀರ್ಣರಾಗದಂತೆ ನೋಡಿಕೊಳ್ಳುತ್ತ ತಮ್ಮ ಜಿಲ್ಲೆಯೇ ಟಾಪ್ ನಲ್ಲಿ ಇರುವಂತೆ ಗಮನವನ್ನು ನೀಡಲಾಗುತ್ತಿತ್ತು. ಇದರಿಂದಾಗಿ ಜಿಲ್ಲೆಯ ನಂಬರ್ ಸ್ಥಾನಮಾನವೇ ಬೇಡವೆಂದು ಈ ಬಾರಿ ಗ್ರೇಡ್ ಪದ್ಧತಿಯನ್ನು ಅಳವಡಿಸಲಾಗಿದೆ. ಗ್ರೇಡ್ ಅನ್ನು ಎ, ಬಿ, ಸಿ ಎಂದು ವಿಭಾಗಿಸಲಾಗಿದೆ.
ಎ ಗ್ರೇಡ್ ಪಡೆದಿರುವ ಜಿಲ್ಲೆಗಳು : ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಬೀದರ್, ಚಾಮರಾಜನಗರ,ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿಕ್ಕೋಡಿ, ಚಿತ್ರದುರ್ಗ, ದಾವಣಗೆರೆ,ದಾರವಾಡ, ಗದಗ, ಹಾಸನ, ಹಾವೇರಿ, ಕಲ್ಬರ್ಗಿ, ಕೊಡಗು ಕೋಲಾರ, ಕೊಪ್ಪಳ, ಮಧುಗಿರಿ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ ಸಿರಸಿ, ತುಮಕೂರು, ಉಡುಪಿ, ಉತ್ತರಕನ್ನಡ, ವಿಜಯಪುರ ಸೇರಿ 32 ಜಿಲ್ಲೆಗಳು ಎ ಗ್ರೇಡ್ ಅನ್ನು ಪಡೆದುಕೊಂಡಿದೆ.
‘ಬಿ’ ಗ್ರೇಡ್‌ನಲ್ಲಿರುವ ಜಿಲ್ಲೆಗಳು : ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಜಿಲ್ಲೆಗಳು ಬಿ ಗ್ರೇಡ್ ಪಡೆದುಕೊಂಡಿದ್ದು. ಶೈಕ್ಷಣಿಕ ಪರಿಭಾಷೆಯಲ್ಲಿ ಹೇಳುವುದಾರೆ ಈ ಎರಡು ಜಿಲ್ಲೆಗಳು ಫಲಿತಾಂಶದಲ್ಲಿ ಕ್ಷೀಣ ಲೆಕ್ಕ ಎಂದು ಹೇಳಲಾಗುತ್ತದೆ.
ಗ್ರೇಡ್ ವಿಭಾಗಿಸುವುದು ಹೇಗೆ?
ಶೇಕಡವಾರುವಿನಲ್ಲಿ ಗುಣಮಟ್ಟದ ಮೂಲಕ ಈ ಗ್ರೇಡ್ ಅಳೆಯಲಾಗಿತ್ತದೆ. ಶೇ 40 ಉತ್ತೀರ್ಣತೆಯ ಮಾನದಂಡ, ಶೇ 20ರಷ್ಟನ್ನು ಎಷ್ಟು ವಿದ್ಯಾರ್ಥಿಗಳು 60%ಗಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂಬುದು ಶೇ 40 ಒಟ್ಟಾರೆ ವಿದ್ಯಾರ್ಥಿಗಳು ಗಳಿಸಿರುವ ಅಂಕದ ಆಧಾರದ ಮೇಲೆ ಎಲ್ಲವನ್ನು ಸೇರಿಸಿ ಶೇ 100ಕ್ಕೆ ಲೆಕ್ಕ ಮಾಡಿ ಗ್ರೇಡ್‌ಗಳನ್ನು ನೀಡಲಾಗಿದೆ.
ಗುಣಮಟ್ಟದ ವಿಚಾರದಲ್ಲಿ ಎ, ಬಿ. ಸಿ ನಿರ್ಧಾರ ಹೇಗೆ..?
ಶೇ 75 ರಿಂದ 100% ಪಡೆದಿದ್ದರೇ ಎ ಗ್ರೇಡ್
ಶೇ 60 ರಿಂದ 75% ರ ಒಳಗೆ ಪಡೆದಿದ್ದರೇ ಬಿ ಗ್ರೇಡ್
ಶೇ 60% ಕ್ಕಿಂತ ಕಡಿಮೆ ಪಡೆದಿದ್ದರೇ ಸಿ ಗ್ರೇಡ್ ಅನ್ನು ನೀಡಲಾಗುತ್ತದೆ. ಎಸ್ಎಸ್ಎಲ್‌ಸಿ ಪರೀಕ್ಷೆಯ 2022ರ ಫಲಿತಾಂಶದಲ್ಲಿ 34 ಶೈಕ್ಷಣಿಕ ಜಿಲ್ಲೆಗಳನ್ನು ಲೆಕ್ಕಚಾರ ಹಾಕಿ ಎ ಮತ್ತು ಬಿ ಎಂದು ಗುರುತಿಸಿ ಗ್ರೇಡ್ ನೀಡಲಾಗಿದೆ.
ಎ, ಬಿ, ಸಿ ಗ್ರೇಡ್ ಮಾನದಂಡ ಏಕೆ..?
ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳು ಇವೆ. ಪ್ರಥಮ, ದ್ವಿತೀಯ ಎಂದು ಜಿಲ್ಲೆಯನ್ನು ಗುರುತಿಸುವುದಿಲ್ಲ. ಎ, ಬಿ, ಸಿ ಗ್ರೇಡ್ ಎಂದು ನೀಡಲಾಗಿದೆ. ಎ ಗ್ರೇಡ್ ನಲ್ಲಿ 32 ಜಿಲ್ಲೆಗಳಿವೆ, ಬಿ ಗ್ರೇಡ್ ನಲ್ಲಿ ಕೇವಲ ಎರಡು ಜಿಲ್ಲೆಗಳಿವೆ. ಜಿಲ್ಲೆಗಳಲ್ಲಿನ ಆರೋಗ್ಯಕರವಲ್ಲದ ಸ್ಪರ್ಧೆ ಏರ್ಪಟ್ಟ ಕಾರಣದಿಂದ ಗ್ರೇಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ