Home Karnataka State Politics Updates ಯಾರಿಗುಂಟು ಯಾರಿಗಿಲ್ಲ | ಭಾಷಣ ಸ್ಪರ್ಧೆಯಲ್ಲಿ ಗೆದ್ರೆ ಸಿಗುತ್ತೆ ಐಫೋನ್, ವಕ್ತಾರ ಹುದ್ದೆ – ರಾಜ್ಯ...

ಯಾರಿಗುಂಟು ಯಾರಿಗಿಲ್ಲ | ಭಾಷಣ ಸ್ಪರ್ಧೆಯಲ್ಲಿ ಗೆದ್ರೆ ಸಿಗುತ್ತೆ ಐಫೋನ್, ವಕ್ತಾರ ಹುದ್ದೆ – ರಾಜ್ಯ ಯುವ ಕಾಂಗ್ರೆಸ್‌ನಿಂದ ಭರ್ಜರಿ ಆಫರ್

Hindu neighbor gifts plot of land

Hindu neighbour gifts land to Muslim journalist

ನಂಬಿದರೆ ನಂಬಿ, ಬಿಟ್ಟರೆ ಬಿಡಿ! ಆದರೆ ಇದು ಸತ್ಯ. ಕಾಂಗ್ರೆಸ್ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಐಫೋನ್ ಮೊಬೈಲ್ ಬಹುಮಾನ ಕೊಡುವುದಾಗಿ ಘೋಷಿಸಿದೆ. ಜತೆಗೆ ವಕ್ತಾರನ್ನಾಗಿ ಮಾಡುವುದಾಗಿಯೂ ಹೇಳಿದೆ. ಯಾರಿಗುಂಟು ಯಾರಿಗಿಲ್ಲ ಈ ಆಫರ್. ಹೇಳಿ!!!

ಈ ಮಾಹಿತಿ ನೀಡಿದವರು, ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೃಷ್ಣ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರಿಸ್ ಗುರುವಾರ ಈ ಬಂಪರ್ ಪ್ರೈಜ್ ಭಾಷಣ ಸ್ಪರ್ಧೆಯ ಮಾಹಿತಿಯನ್ನು ಪ್ರಕಟಿಸಿದರು.

ಕಾಂಗ್ರೆಸ್ ನ ವಿಚಾರವನ್ನು ಜನರಿಗೆ ಮುಟ್ಟಿಸಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ ಎನ್ನಲಾಗಿದೆ. ರಾಜ್ಯಮಟ್ಟದಲ್ಲಿ ಗೆದ್ದವರಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ.

ಮೊದಲು ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುವುದು. ಅಲ್ಲಿ ಆಯ್ಕೆಯಾದ ಪ್ರಮುಖ ಅಭ್ಯರ್ಥಿಗಳಿಗೆ ಜೂನ್ 18ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಂತಿಮ ಸ್ಪರ್ಧೆ ನಡೆಸಲಾಗುವುದು. ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿಜೇತರಾಗುವವರಿಗೆ ಪ್ರಶಸ್ತಿ ನೀಡಲಾಗುವುದು. ಮೊದಲ ಬಹುಮಾನ ಐ ಫೋನ್ 13 ಪ್ರೋ, ಎರಡನೇ ಬಹುಮಾನವಾಗಿ ಐ ಫೋನ್ 13 ಹಾಗೂ ಮೂರನೇ ಬಹುಮಾನವಾಗಿ ಒನ್ ಪ್ಲಸ್ ಫೋನ್ ನೀಡಲಾಗುವುದು. ಜತೆಗೆ ಉತ್ತಮ ಭಾಷಣ ಮಾಡುವ 10 ಮಂದಿಯನ್ನು ಯುವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಲಾಗುವುದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರುನ್ನು ಜಿಲ್ಲಾ ಮಟ್ಟದ ವಕ್ತಾರರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಸ್ಪರ್ಧೆ ಕುರಿತು ನಲಪಾಡ್ ಮಾಹಿತಿ ನೀಡಿದ್ದಾರೆ.