ಮುಲ್ಕಿ : ಹಣಕಾಸಿನ ಮುಗ್ಗಟ್ಟು -ಯುವಕ ಆತ್ಮಹತ್ಯೆ

Share the Article

ಮುಲ್ಕಿ: ಯುವಕನೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಮುಲ್ಕಿ ಬಳ್ಕುಂಜೆಯ ಕೋಟ್ನಾಯಗುತ್ತು ಗುಡ್ಡೆಯಲ್ಲಿ
ನಡೆದಿದೆ.

ಮೃತ ಯುವಕನನ್ನು ಕಾರ್ಕಳದ ಕಲ್ಯಾ ನಿವಾಸಿ ಮೂಡಬಿದ್ರೆ ಒಂಟಿಕಟ್ಟೆ ಬಳಿ ನಿವಾಸಿ ರಾಕೇಶ್ ಪೂಜಾರಿ (26) ಎಂದು ಗುರುತಿಸಲಾಗಿದೆ.

ಮೃತ ರಾಕೇಶ್ ಪೂಜಾರಿ ಮೂಡಬಿದ್ರೆಯಲ್ಲಿ ಶ್ರೀರಾಮ್ ಫೈನಾನ್ಸ್ ನಲ್ಲಿ ಕಲೆಕ್ಷನ್ ಕೆಲಸದಲ್ಲಿದ್ದ. ಆದರೆ ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದ ಎನ್ನಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಬಳಕುಂಜೆಯಲ್ಲಿರುವ ತನ್ನ ಮಿತ್ರನ ಕಾರನ್ನು ತಿರುಗಾಡಲೆಂದು ಕೊಂಡು ಹೋಗಿದ್ದ ರಾಕೇಶ್ ಪೂಜಾರಿ ವಾಪಸ್ಸು ಬಂದು ಬಳಕುಂಜೆ ಕೋಟ್ನಾಯಗುತ್ತು ರಸ್ತೆಬದಿಯಲ್ಲಿ ಇಟ್ಟು ಗುಡ್ಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ರಾಕೇಶ್ ಪೂಜಾರಿ ಮೊಬೈಲ್ ಮೃತ ರಾಕೇಶ್ ಪೂಜಾರಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮನೆಯವರು
ಹುಡುಕಾಡಿದಾಗ ನೇಣು ಬಿಗಿದ ರೀತಿಯಲ್ಲಿ ಮೃತದೇಹ ಗುಡ್ಡೆಯಲ್ಲಿ ಪತ್ತೆಯಾಗಿದೆ.

ಮೃತ ಯುವಕನ ಮಾವ ರಾಜೇಶ್ ಒಂಟಿಕಟ್ಟೆ ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave A Reply