Home Education SSLC ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಹಾಗೂ ಸ್ಕ್ಯಾನ್ ಪ್ರತಿ ಪಡೆಯುವ ದಿನಾಂಕ ಪ್ರಕಟಿಸಿದ ಶಿಕ್ಷಣ...

SSLC ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಹಾಗೂ ಸ್ಕ್ಯಾನ್ ಪ್ರತಿ ಪಡೆಯುವ ದಿನಾಂಕ ಪ್ರಕಟಿಸಿದ ಶಿಕ್ಷಣ ಪರೀಕ್ಷಾ ಮಂಡಳಿ

Hindu neighbor gifts plot of land

Hindu neighbour gifts land to Muslim journalist

ವಿದ್ಯಾರ್ಥಿಗಳೂ ಸೇರಿದಂತೆ ಪೋಷಕರು ಕಾತುರದಿಂದ ಕಾಯುತ್ತಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲು ಗೈ ಸಾಧಿಸಿದ್ದಾರೆ. ಇದೀಗ ಇದರ ಬೆನ್ನಲ್ಲೇ ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಹಾಗೂ ಸ್ಕ್ಯಾನ್ ಪ್ರತಿ ಪಡೆಯುವ ದಿನಾಂಕವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.

ಮುಖ್ಯ ದಿನಾಂಕದ ಮಾಹಿತಿ ಇಂತಿದೆ:

ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿಗೆ:
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 20-05-2022
ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 30 -05-2022

ಡೆಬಿಟ್ ಕಾರ್ಡ್ , ಕ್ರೆಡಿಟ್ ಕಾರ್ಡ್, ಆನ್‌ ಲೈನ್ ಮೂಲಕ ಅಲ್ಲಿ ಸಲ್ಲಿಸಿದ ಬಳಿಕ ಬ್ಯಾಂಕ್ ನಲ್ಲಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 31 -05-2022

ಉತ್ತರ ಪತ್ರಿಕೆಗಳ ಮರು ಎಣಿಕೆ ಹಾಗೂ ಮೌಲ್ಯಮಾಪನ :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 24-05-2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 06 -06-2022

ಮರು ಮೌಲ್ಯಮಾಪನ ಮತ್ತು ಸ್ಕ್ಯಾನ್ ಪ್ರತಿ ಪಡೆಯಲು ಶುಲ್ಕದ ವಿವರ:

ಎಸ್‌ಎಸ್‌ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಒಂದು ವಿಷಯಕ್ಕೆ 410 ರೂ. ಶುಲ್ಕ ಪಾವತಿಸಬೇಕು. ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ 810 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಅನ್‌ಲೈನ್ ನಲ್ಲಿ ಸಲ್ಲಿಸಿದರೆ ಈ ಶುಲ್ಕ ಪಾವತಿಸಬೇಕು. ಆಫ್‌ ಲೈನ್ ಮೂಲಕ ಪಾವತಿ ಮಾಡಿದರೆ ಹೆಚ್ಚುವರಿ ಹತ್ತು ರೂ. ಪಾವತಿಸಬೇಕು.

ಸ್ಕ್ಯಾನ್ ಪ್ರತಿ ಹಾಗೂ ಮರು ಮೌಲ್ಯಮಾಪನಕ್ಕೆ ಭೌತಿಕವಾಗಿ ಅರ್ಜಿ ಸಲ್ಲಿಸುವುದನ್ನು ರದ್ದು ಮಾಡಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ವೆಬ್ ಸೈಟ್ sslc.Karnataka.gov. in ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ನಿಗಧಿತ ಪೋರ್ಟ್ ಲ್ ನಲ್ಲಿ ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಚಲನ್ ಡೌನ್‌ ಲೋನ್ ಮಾಡಿಕೊಂಡು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಿದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳ ಮೊಬೈಲ್ ಗೆ ಸಂದೇಶ ಬರಲಿದೆ.