ಎರಡು ಖಾಸಗಿ ಬಸ್ ಗಳ ನಡುವೆ ಭೀಕರ ಅಪಘಾತ !!| ಈ ಆಕ್ಸಿಡೆಂಟ್ ನ ಭಯಾನಕ ದೃಶ್ಯ ವೈರಲ್

Share the Article

ಇದೊಂದು ಭಯಾನಕ ದೃಶ್ಯ. ಈ ದೃಶ್ಯವನ್ನು ಕಂಡು ನೀವೊಮ್ಮೆ ಬೆಚ್ಚಿಬೀಳುವುದು ಖಂಡಿತಾ. ತಮಿಳುನಾಡಿನ ಸೇಲಂನಲ್ಲಿ ಎರಡು ಬಸ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ 30 ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ವಾಹನವೊಂದರಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಈ ಅಪಘಾತದ ಭಯಾನಕ ದೃಶ್ಯ ಸೆರೆಯಾಗಿದೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಎಡಪ್ಪಾಡಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ತಿರುಚೆಂಗೋಡಿನಿಂದ ಬರುತ್ತಿದ್ದ ಇನ್ನೊಂದು ಬಸ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿವೆ. ಎರಡು ಖಾಸಗಿ ಬಸ್‌ಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಡಿಕ್ಕಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ, ಡಿಕ್ಕಿ ಹೊಡೆದ ನಂತರ ಬಸ್ಸಿನಲ್ಲಿ ಕುಳಿತಿದ್ದ ಚಾಲಕ ಡ್ರೈವಿಂಗ್ ಸೀಟ್‌ನಿಂದ ಹಾರಿ ಬಿಡುವುದನ್ನು ಮತ್ತು ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ ವಾಹನದ ಮುಂಭಾಗದ ಗಾಜಿಗೆ ತಾಗುವುದನ್ನು ಕಾಣಬಹುದು. ಈ ಡಿಕ್ಕಿಯ ಪರಿಣಾಮ ವಾಹನಕ್ಕೆ ತೀವ್ರ ಹಾನಿಯಾಗಿದೆ.

ಇತರ ಪ್ರಯಾಣಿಕರು ಕೂಡ ಆಘಾತಕ್ಕೊಳಗಾಗಿದ್ದು, ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸೇಲಂ ಮತ್ತು ಎಡಪ್ಪಾಡಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ವೈರಲ್ ವೀಡಿಯೋ
Leave A Reply