ಗುಂಪು ಗುಂಪಾಗಿ ಮಹಿಳೆಯ ಮೇಲೆ ದಾಳಿ ಮಾಡಿ ರೆಪ್ಪೆ ಕಚ್ಚಿ ಕೂದಲು ತಿಂದ ಇಲಿಗಳು

ರಾಜಸ್ಥಾನ: ಚಿಕಿತ್ಸೆ ಪಡೆಯುತ್ತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆಯೊಬ್ಬರ ಮೇಲೆ ಇಲಿಗಳು ದಾಳಿ ನಡೆಸಿವೆ. ಹಾಗೆ ದಾಳಿ ನಡೆಸಿದ ಇಲಿ, ಆಕೆಯ ಬಲಗಣ್ಣಿನ ರೆಪ್ಪೆಗಳನ್ನು ಕಚ್ಚಿ ಕೂದಲುಗಳನ್ನು ತಿಂದಿರುವ ಘಟನೆ ನಡೆದಿದೆ.

 

ರಾಜಸ್ಥಾನದ ಕೋಟಾ ನಗರದಲ್ಲಿರುವ ಮಹಾರಾವ್ ಭೀಮ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ. ಇಲಿಗಳ ದಾಳಿಗೆ ಒಳಗಾದ ಮಹಿಳೆಯನ್ನು ರೂಪವತಿ(28) ಎಂದು ಗುರುತಿಸಲಾಗಿದೆ. ಆ ಆಸ್ಪತ್ರೆಯ ನ್ಯೂರೋ ಸ್ಟೋಕ್ ವಿಭಾಗದಲ್ಲಿ 46 ದಿನಗಳಿಂದ ಈಕೆಗೆ ಚಿಕಿತ್ಸೆ ಪಡೆಯುತ್ತಿದ್ದು, ದೇಹದ ಯಾವುದೇ ಅಂಗದಲ್ಲಿ ಚಲನೆಯಿರಲಿಲ್ಲ. ಮೊನ್ನೆ ಮೇ 16 ರಂದು ಮದ್ಯಾಹ್ನದ ಸುಮಾರಿಗೆ ಇಳಿ ದಾಳಿಯ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಆಕೆಯ ಪತಿ ವೈದ್ಯರ ಗಮನಕ್ಕೆ ತಂದಿದ್ದು, ಇದೀಗ ಚಿಕಿತ್ಸೆ ನೀಡಲಾಗುತ್ತಿದೆ.

ಕುಟುಂಬಸ್ಥರು ಇಲಿ ದಾಳಿ ಮಾಡಿರುವುದನ್ನು ನಾವು ನೋಡಿದ್ದೇವೆ, ಅದರಿಂದಲೇ ಹೀಗೆ ಆಗಿದೆ ಎಂದು ಆರೋಪಿಸಿದ್ದಾರೆ. ಆದರೆ ವೈದ್ಯರು ಈ ಘಟನೆ ನಡೆದಿರುವುದನ್ನು ತಳ್ಳಿ ಹಾಕಿದ್ದಾರೆ. ಗಾಯದ ಸ್ವರೂಪ ಇಲಿ ತಿಂದ ಹಾಗೆ ಇತ್ತು. ಅಲ್ಲದೆ ಆಸ್ಪತ್ರೆಯಲ್ಲಿ ಇಲಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದವು.

Leave A Reply

Your email address will not be published.