Home ಕಾಸರಗೋಡು ಮುಂದುವರಿದ ನಟಿಯರ ಆತ್ಮಹತ್ಯೆ | ಮಂಗಳಮುಖಿ ನಟಿ, ರೂಪದರ್ಶಿ ಶೆರಿನ್ ಆತ್ಮಹತ್ಯೆ | ಶೆಹ್ನಾ ಸಾವಿನ...

ಮುಂದುವರಿದ ನಟಿಯರ ಆತ್ಮಹತ್ಯೆ | ಮಂಗಳಮುಖಿ ನಟಿ, ರೂಪದರ್ಶಿ ಶೆರಿನ್ ಆತ್ಮಹತ್ಯೆ | ಶೆಹ್ನಾ ಸಾವಿನ ಬೆನ್ನಲ್ಲೇ ಮತ್ತೋರ್ವ ನಟಿಯ ಸಾವು|

Hindu neighbor gifts plot of land

Hindu neighbour gifts land to Muslim journalist

ನಟಿ, ರೂಪದರ್ಶಿಯರ ಸಾವಿನ ಸರಮಾಲೆಗೆ ಈಗ ಮತ್ತೊಂದು ನಟಿಯ ಸಾವು ಸೇರಿಕೊಂಡಿದೆ. ನಟಿ, ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದ ಮಂಗಳಮುಖಿ ಶೆರಿನ್ ಸೆಲಿನ್ ಮ್ಯಾಥ್ಯೂ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಚ್ಚಿಯ ಚಕ್ಕರಪರಂಬು ಪ್ರದೇಶದಲ್ಲಿರುವ ಅಪಾರ್ಟೆಂಟ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಶೆರಿನ್ ಮೃತಪಟ್ಟಿದ್ದಾರೆ. 26 ವರ್ಷ ವಯಸ್ಸಿನ ಶೆರಿನ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಆಕೆಯ ರೂಂಮೇಟ್ ಮೊದಲು ನೋಡಿದ್ದು, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಬಳಿಕ ಮಾನಸಿಕ ಒತ್ತಡ ಎದುರಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆಳಪ್ಪುಳ ಜಿಲ್ಲೆ ಮೂಲದ ಶೆರಿನ್ ಕಳೆದ ಹಲವು ವರ್ಷಗಳಿಂದ ಕೊಚ್ಚಿಯಲ್ಲಿ ನೆಲೆಸಿದ್ದರು.

ಈ ಕುರಿತಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಚಕ್ಕರಪರಂಬು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೇ 12 ರಂದು, ಕೋಳಿಕ್ಕೋಡ್‌ನ ಯುವ ಮಾಡೆಲ್ ಮತ್ತು ನಟಿ ಶಹ್ನಾ ಸಜದ್ ತನ್ನ 21 ನೇ ಹುಟ್ಟುಹಬ್ಬದಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬೆನ್ನಲ್ಲೇ ಶೆರಿನ್ ಸಾವು ಮಾಡೆಲಿಂಗ್ ಕ್ಷೇತ್ರದ ಆಪ್ತರನ್ನು ಆಘಾತಕ್ಕೀಡು ಮಾಡಿದೆ.