Home News ಅತಿಯಾಗಿ ಮೊಬೈಲ್ ನೋಡಬೇಡ ಎಂದು ಗದರಿದ್ದ ಪೋಷಕರು!! ಅಂದೇ ರಾತ್ರಿ ಶವವಾಗಿ ಪತ್ತೆಯಾದಳು ಯುವತಿ!??

ಅತಿಯಾಗಿ ಮೊಬೈಲ್ ನೋಡಬೇಡ ಎಂದು ಗದರಿದ್ದ ಪೋಷಕರು!! ಅಂದೇ ರಾತ್ರಿ ಶವವಾಗಿ ಪತ್ತೆಯಾದಳು ಯುವತಿ!??

Hindu neighbor gifts plot of land

Hindu neighbour gifts land to Muslim journalist

ದೊಡ್ಡಬಳ್ಳಾಪುರ:ಅತಿಯಾಗಿ ಮೊಬೈಲ್ ನೋಡುತ್ತೀಯಾ ಎಂದು ಪೋಷಕರು ಗದರಿದ್ದೇ ಯುವತಿಯೊಬ್ಬಳ ಸಾವಿಗೆ ಕಾರಣವಾದ ಘಟನೆಯೊಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಜಯಶ್ರೀ(19) ಎಂದು ಗುರುತಿಸಲಾಗಿದೆ.

ಮೃತ ಯುವತಿ ದೊಡ್ಡಬಳ್ಳಾಪುರ ನಿವಾಸಿಗಳಾದ ನರಸಪ್ಪ-ಜಯಲಕ್ಷಮ್ಮ ದಂಪತಿಯ ಎರಡನೇ ಮಗಳಾಗಿದ್ದು, ಈಕೆಯು ಪ್ರತೀ ದಿನ ರಾತ್ರಿ ಅತಿಯಾಗಿ ಮೊಬೈಲ್ ನೋಡುತ್ತಿರುತ್ತಿದ್ದಳು. ಘಟನೆ ನಡೆದ ದಿನವೂ ಆಕೆ ಮೊಬೈಲ್ ವೀಕ್ಷಿಸುವುದರಲ್ಲಿ ಮಗ್ನಳಾಗಿದ್ದನ್ನು ಕಂಡ ಪೋಷಕರು ಅತಿಯಾಗಿ ಮೊಬೈಲ್ ನೋಡದಂತೆ ಗದರಿಸಿದ್ದರು.

ಇದರಿಂದ ಮನನೊಂದ ಆಕೆ ಅದೇ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದು, ಗಾಬರಿಗೊಂಡ ಪೋಷಕರು ನೆರೆಮನೆಯವರ ಸಹಾಯದಿಂದ ಗ್ರಾಮದೆಲ್ಲೆಡೆ ಹುಡುಕಾಡಿದಾಗ ಕೆರೆಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ.

ಯುವತಿಯ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಇದೊಂದು ಕೊಲೆ ಎನ್ನುವ ಅನುಮಾನ ಹೆಚ್ಚಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದು, ಆಕೆಯಯೊಂದಿಗೆ ಸಂಪರ್ಕದಲ್ಲಿದ್ದವರ ವಿಚಾರಣೆಯೂ ನಡೆಯುತ್ತಿದೆ.