ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಬಂದಾರು “ಶಾಲಾ ಪ್ರಾರಂಭೋತ್ಸವ” –

ಮೈರೋಳ್ತಡ್ಕ : ಮೇ. 16ರಂದು ಬಂದಾರು ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 2022- 23ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.

 

ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದಲ್ಲದೆ,ಪದ್ಮುಂಜ ಸಿ.ಎ ಬ್ಯಾಂಕ್ ವತಿಯಿಂದ ಶಾಲೆಗೆ 7500 ಹಾಳೆಯ ಪ್ರತಿಗಳನ್ನು ಕೊಡುಗೆಯಾಗಿ ಹಸ್ತಾಂತರಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಬು ಗೌಡ ಮಡ್ಯಲಕಂಡ, ಡೊಂಬಯ್ಯ ಗೌಡ ಖಂಡಿಗ ಮತ್ತು ನಿರಂಜನ ನಡುಮಜಲು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಗೆ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಂದ ಹಣತೆ ಹಚ್ಚಿಸಿ ಬರವಣಿಗೆ ಸಾಮಾಗ್ರಿ ನೀಡಿ ಅವರನ್ನು ಶಾಲೆಗೆ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಸಿಹಿತಿಂಡಿ ಹಾಗೂ ಸಿಹಿಯೂಟ ನೀಡಿ “ಮಳೆಬಿಲ್ಲು” ಕಾರ್ಯಕ್ರಮದಂತೆ ಮಕ್ಕಳಿಗೆ ಆಟ ಆಡಿಸಿ ಶಾಲಾ ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀಧರ್ ಸ್ವಾಗತಿಸಿ, ಶಿಕ್ಷಕಿ ಸುರೇಖ ಜಿ ಸಾಲಿಯಾನ್ ಧನ್ಯವಾದವಿತ್ತರು. ಶಿಕ್ಷಕರಾದ ಮಾಧವ ಗೌಡ. ಡಿ. ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖೋಪಾಧ್ಯಾಯರಾದ ಚಂದ್ರಾವತಿ. ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.

Leave A Reply

Your email address will not be published.