Home Breaking Entertainment News Kannada ಪುನೀತ್ ರಾಜ್‌ಕುಮಾರ್ ನಿಧನದ ನೋವು ಮಾಸುವ ಮುನ್ನವೇ ‘ದೊಡ್ಮನೆ ಕುಟುಂಬ’ಕ್ಕೆ ಎದುರಾಯಿತು ಆಘಾತ!

ಪುನೀತ್ ರಾಜ್‌ಕುಮಾರ್ ನಿಧನದ ನೋವು ಮಾಸುವ ಮುನ್ನವೇ ‘ದೊಡ್ಮನೆ ಕುಟುಂಬ’ಕ್ಕೆ ಎದುರಾಯಿತು ಆಘಾತ!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ‘ದೊಡ್ಮನೆ ಕುಟುಂಬ’ ಎಂದೇ ಖ್ಯಾತಿ ಪಡೆದಿರುವ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪುನೀತ್ ರಾಜ್‌ಕುಮಾರ್ ಅವರ ನಿಧನದ ನೋವು ಮಾಸುವ ಮುನ್ನವೇ ಕುಟುಂಬದಲ್ಲಿ ಮತ್ತೊಮ್ಮೆ ದುಃಖ ಆವರಿಸಿದೆ.

ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಎಸ್‌.ಎ.ಚಿನ್ನೇಗೌಡ ಅವರ ಸಹೋದರಿಯಾದ ಎಸ್‌.ಎ.ನಾಗಮ್ಮ ಇಂದು ವಿಧಿವಶರಾಗಿದ್ದಾರೆ.

81 ವರ್ಷ ವಯಸ್ಸಿನ ನಾಗಮ್ಮ, ಕಳೆದ ಎರಡು ವಾರಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.‌ ಇಂದು ಬೆಳಗ್ಗೆ ಬಸವೇಶ್ವರ ನಗರದಲ್ಲಿರುವ ಮಗನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹೊಸ ಕನ್ನಡ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/FbPlbHZ3AZiBoOtzMVYNKY

ಮೃತರು ಸಹೋದರಾದ ಎಸ್.ಎ.ಚಿನ್ನೇಗೌಡ, ಎಸ್‌.ಎ.ಗೋವಿಂದರಾಜು, ಎಸ್.ಎ.ಶ್ರೀನಿವಾಸ್, ಸಹೋದರಿ ಜಯಮ್ಮ, ಮಗ ಮಹೇಶ್ʼರನ್ನ ಅಗಲಿದ್ದಾರೆ. ಇಂದು ಸಂಜೆ ಇಳಂದೂರಿನ ಕೆಸ್ತೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.