ಊಟದ ಬಿಲ್ 4000/-, ಟಿಪ್ಸ್ 62,000/-| ಕಾರಣ ಅಮೇಜಿಂಗ್!
ಸಾಧಾರಣವಾಗಿ ಕೆಲವೊಮ್ಮೆ ಮನೆ ಊಟ ತಿಂದು ಬೋರಾದರೆ ಹೊರಗಡೆ ಹೋಗಿ ಏನಾದರೂ ತಿನ್ನುವ ಎಂದು ಆಸೆ ಮೂಡುವುದು ಸಹಜ. ಹಾಗಾಗಿ ಕೆಲವರು ಸಹಜವಾಗಿ ಹೋಟೆಲ್ ಗೆ ಹೋಗುತ್ತಾರೆ. ಕೆಲವೊಂದು ರೆಸ್ಟೋರೆಂಟ್ ಗಳಿಗೆ ಹೋದರೆ ಕೆಲವರು ಊಟ ಬಹಳ ರುಚಿಯಾಗಿ ಇದ್ದರೆ ಟಿಪ್ಸ್ ಕೊಡುವುದು ಸಾಮಾನ್ಯ. ಊಟದ ಜೊತೆಗೂ ಕೆಲವೊಮ್ಮೆ ಅಲ್ಲಿನ ಸಿಬ್ಬಂದಿಯ ವರ್ತನೆನೂ ಇಷ್ಟ ಆದರೆ ಅವರಿಗೂ ಎಕ್ಸಟ್ರಾ ಟಿಪ್ಸ್ ಕೊಡುತ್ತಾರೆ.
ಆಪ್ತತೆಯಿಂದ ಆಹಾರ, ಮೆನು ತಿಳಿಸಿ, ನಮ್ಮ ಇಷ್ಟಗಳನ್ನು ಕೇಳಿ ಆಹಾರ ಉಣಬಡಿಸುವ ವೈಟರ್ಗಳಿಗಾಗಿ ನಾವು ಟಿಪ್ಸ್ ಕೊಟ್ಟು ಬರುತ್ತೇವೆ.
ಇದು ದಾಕ್ಷಿಣ್ಯವೇನಲ್ಲ, ಇದು ಅವರ ಸೇವೆಗೆ ನಾವು ಕೊಡುವ ಗೌರವ ಎಂದೇ ಅರ್ಥ.
ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ರೆಸ್ಟೋರೆಂಟ್ನಲ್ಲಿ ವೈಟ್ರಸ್ ಸೇವೆಗೆ ಫಿದಾ ಆಗಿ ಆಕೆಗೆ ದೊಡ್ಡ ಮೊತ್ತದ ಟಿಪ್ಸ್ ಕೊಟ್ಟಿದ್ದಾನೆ. ಆತ ತಿನ್ನಲು ಖರ್ಚು ಮಾಡಿರುವುದರ ಬಹುಪಾಲಾಗಿ ಟಿಪ್ಸ್ ನೀಡಿದ್ದಾನೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
20 ವರ್ಷಗಳಿಂದ ರೆಸ್ಟೊರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿರುವ ಜೆನ್ನಿಫರ್ ವೆರ್ನಾನ್ಸಿಯೊ ಎಂಬ ಮಹಿಳೆ ತಮ್ಮ ಕೆಲಸದಲ್ಲಿ ಪಡೆದ ಮೊದಲ ಬಾರಿ ದೊಡ್ಡ ಮೊತ್ತದ ಟಿಪ್ಸ್ ಇದು. ಆ ಟಿಪ್ಸ್ ಎಷ್ಟು ಹೇಳಿದರೆ ನೀವು ದಂಗಾಗಬಹುದು. ಬರೋಬ್ಬರಿ 62,000/- ರೂ. ಟಿಪ್ಸ್ ನೀಡಿದ್ದಾರೆ ಆ ವ್ಯಕ್ತಿ. ಆ ವ್ಯಕ್ತಿ ಊಟ ಮಾಡಿದ ಬಿಲ್ ಎಷ್ಟೆಂದರೆ 4000/- ರೂ.
ಮೇ 7 ರಂದು ಈ ಘಟನೆ ನಡೆದಿದೆ. ಊಟ ಮಾಡಲು ರೆಸ್ಟೋರೆಂಟ್ ಗೆ ಬಂದ ವ್ಯಕ್ತಿಯೊಂದಿಗೆ ಮಾತನಾಡುವಾಗ, ವೆರ್ನಾನ್ಸಿಯೊ ತನ್ನ ಮೂರು ವರ್ಷದ ಮಗುವಿಗೆ ಬೇಬಿ ಸಿಟ್ಟರ್ ಅನ್ನು ವ್ಯವಸ್ಥೆ ಮಾಡಲು ಸಾಧ್ಯವಾಗದ ಕಾರಣ ತಾನು ತುಂಬಾ ಕಷ್ಟ ಆಗುತ್ತಿದೆ ಎಂದು ಹೇಳಿದ್ದಾಳೆ. ಊಟ ಎಲ್ಲಾ ಮಾಡಿದ ಮೇಲೆ ಆ ವ್ಯಕ್ತಿ ಹಾಗೂ ಆತನ ಹೆಂಡತಿ ಇಬ್ಬರೂ ಆ ವೈಟ್ರೆಸ್ ಗೆ ನೀಡಿದ ಅನಿರೀಕ್ಷಿತ ಟಿಪ್ಸಿನಿಂದ ಆಕೆಯ ದಿನವೇ ಬದಲಾಯಿತು. ಆಕೆಗೆ ಮಾತು ಹೊರಡದಂತಾಗಿತ್ತು. ಕೂಡಲೇ ವೈಟ್ರೆಸ್ ಮ್ಯಾನೇಜರ್ಗೆ ವಿಷಯ ತಿಳಿಸಿದ್ದಾಳೆ.
ಅಮೆರಿಕದ ರೋಡ್ ಐಲೆಂಡ್ ರಾಜ್ಯದ ಕ್ರಾನ್ಸ್ಟನ್ ನಗರದಲ್ಲಿ ನೆಲೆಗೊಂಡಿರುವ ದಿ ಬಿಗ್ ಚೀಸ್ & ಪಬ್ ಹೆಸರಿನ ರೆಸ್ಟೋರೆಂಟ್, ಟಿಪ್ ಮೊತ್ತವನ್ನು ನಮೂದಿಸಿರುವ ಬಿಲ್ ರಶೀದಿಯ ಚಿತ್ರಗಳನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದೆ.