ಮಂಗಳೂರು : ಇಂದು ಉದ್ಯೋಗ ಮೇಳಕ್ಕೆ ಬರುವ ಕಂಪನಿಗಳ ಸಮಗ್ರ ವಿವರ| 40ಕಂಪನಿಗಳು ಭಾಗಿ, 11 ಸಾವಿರಕ್ಕೂ ಅಧಿಕ ಹುದ್ದೆಗೆ ನೇಮಕಾತಿ

Share the Article

ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ- ಮಾರ್ಗದರ್ಶನ ಕೇಂದ್ರ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಇಂದು ಮತ್ತು ನಾಳೆ ( ಮೇ.15) ಎರಡು ದಿನ ಉದ್ಯೋಗ ಮೇಳ ನಡೆಯಲಿದೆ.

ಮ್ಯಾಜಿಕ್ ಬಸ್‌ನ ಕರ್ನಾಟಕ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ವಲಯದ ಕ್ಲಸ್ಟರ್ ಮ್ಯಾನೇಜ‌ರ್ ಚಿರಂಜೀವಿ ಅಂಬರ್‌ನಾಥ್ 14ರಂದು ಬೆಳಗ್ಗೆ 10.30ಕ್ಕೆ ಉದ್ಯೋಗ ಮೇಳವನ್ನು ಮಂಗಳಾಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ.

40 ಕಂಪನಿ, 11 ಸಾವಿರ ಹುದ್ದೆ: ಎರಡು ದಿನಗಳ ಕಾಲ ಸ್ಥಳದಲ್ಲೇ ನಡೆಯಲಿರುವ ಉದ್ಯೋಗ ಮೇಳದಲ್ಲಿ ಸುಮಾರು 40 ಕಂಪೆನಿಗಳು ಭಾಗವಹಿಸಲಿದ್ದು ಸುಮಾರು 11,100 ಹುದ್ದೆಗಳಿಗೆ ಅರ್ಹರ ನೇಮಕಾತಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಘಟಕ, ಸಂಯೋಜಿತ, ಸ್ವಾಯತ್ತ ಕಾಲೇಜುಗಳಿಂದ ಮತ್ತು ಮಂಗಳೂರು ವಿವಿ ಕ್ಯಾಂಪಸ್‌ನ ವಿದ್ಯಾರ್ಥಿಗಳಿಂದ ಸುಮಾರು 10,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು ಅದನ್ನು ಮ್ಯಾಜಿಕ್ ಬಸ್ ಎಂಬ ಸರ್ಕಾರೇತರ ಸಂಸ್ಥಗೆ ಹಸ್ತಾಂತರಿಸಿದೆ. ಸಂಸ್ಥೆ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಟೋಕನ್ ಒದಗಿಸಿ ನೇಮಕಾತಿಗೆ ನೇರ ಸಂದರ್ಶನ ನಡೆಸಲಿದೆ. ಕನಿಷ್ಠ ವೇತನ 10 ಸಾವಿರ ರೂ. ಇರಲಿದೆ.

ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಲೂ ಅವಕಾಶ ನೀಡಲಾಗಿದೆ. ಸಂದರ್ಶನಕ್ಕೆ ಬರುವಾಗ ಬಯೋಡಾಟ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ಜೊತೆಗೆ, ಗರಿಷ್ಠ ಅರ್ಹತೆಯ ಅಂಕಪಟ್ಟಿ ತರಬೇಕು. ಅಂತಿಮ ವರ್ಷದ ಪದವಿ ಅಥವಾ ಸ್ನಾತಕೋತ್ತರ ಪದವೀಧರರೂ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಭಾಗವಹಿಸುವ ಪ್ರಮುಖ ಕಂಪನಿಗಳು : ಆಪೋಲೊ ಫಾರ್ಮಸಿ, ಮುತ್ತೂಟ್ ಫೈನಾನ್ಸ್, ಮೆಡಿಪ್ಲಸ್, ಜಸ್ ಡಯಲ್, ಬೈಜೂಸ್, ಆಕ್ಸಿಸ್ ಬ್ಯಾಂಕ್‌, ಕಾಂಚನಾ ಗ್ರೂಪ್ ಆಫ್ ಕಂಪೆನೀಸ್, ಹೋಂಡಾ ಮ್ಯಾಟ್ರಿಕ್ಸ್, ದಿಯಾ ಸಿಸ್ಟಮ್ಸ್, ಎಚ್ ಡಿಎಫ್‌ಸಿ ಬ್ಯಾಂಕ್, ಮಾಂಡೋವಿ ಮೋಟರ್ಸ್, ಮೋರ್ ಸೂಪರ್ ಮಾರ್ಕೆಟ್ ಸೇರಿದಂತೆ 40 ಕ್ಕೂ ಹೆಚ್ಚು ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ.

ಕಂಪನಿಗಳ‌ ಸವಿವರ ಪಿಡಿಎಫ್ ಫೈಲ್ ಈ ಕೆಳಗೆ ನೀಡಲಾಗಿದೆ.

Leave A Reply