ಹೆಂಡತಿಗೆ ಹಲ್ಲೆ ಮಾಡೋ ವಿಚಾರದಲ್ಲಿ ಕರ್ನಾಟಕ ನಂಬರ್ 1
ಇದೊಂದು ಗಂಭೀರವಾದ ವಿಷಯ. ಎಲ್ಲರೂ ತುಂಬಾ ಆಳವಾಗಿ ಯೋಚಿಸಲೇಬೇಕಾದ ಮುಖ್ಯವಾದ ವಿಷಯ. ಕರ್ನಾಟಕದ ಪಾಲಿಗಂತೂ ಇದು ನಿಜಕ್ಕೂ ಆತಂಕಕಾರಿ ವಿಷಯ.
ವಿಷಯ ಏನಪ್ಪಾ ಅಂದ್ರೆ ಹೆಂಡತಿ ಮೇಲೆ ಹಲ್ಲೆ ನಡೆಸೋ ವಿಚಾರದಲ್ಲಿ ಕರ್ನಾಟಕ ನಂಬರ್ 1 ಸ್ಥಾನ ಪಡೆದಿದೆ. NFHS ಅಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ ಈ ಕರಾಳ ಸತ್ಯ ಹೊರ ಹಾಕಿದೆ. ಬಿಹಾರವನ್ನು ಹಿಂದಿಕ್ಕಿ ಕರ್ನಾಟಕ ನಂಬರ್ 1 ಸ್ಥಾನ ಪಡೆದಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ 2019 ರಿಂದ 2021 ರ ತನಕ ನಡೆಸಲಾಗಿದೆ. ಈ ಸರ್ವೇಯಲ್ಲಿ 18 ರಿಂದ 49 ವರ್ಷ ಮಹಿಳೆಯರನ್ನು ವಿಚಾರಿಸಲಾಗಿದೆ. ಸರ್ವೇ ಪ್ರಕಾರ ರಾಜ್ಯದ ಶೇ.48 ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುವ ಅಂಶ ಬಯಲಾಗಿದೆ. ಅನಂತರ ಬಿಹಾರದಲ್ಲಿ ಶೇ.43 ಸ್ಥಾನ ಪಡೆದಿದೆ. ಈ ಸರ್ವೇಯಲ್ಲಿ ಮಹಿಳೆಯರು ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ಚಿತ್ರಹಿಂಸೆಗೂ ಒಳಪಡುತ್ತಿರುವುದು, ಪತಿಯಿಂದಲೇ ದೈಹಿಕ ಹಲ್ಲೆಗಳು ನಡೆಯುತ್ತಿರುವ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಪತಿ ಹಿಂಸೆಯಿಂದಾಗಿ ಗಾಯಗಳಿಗೆ ತುತ್ತಾಗಿರುವ ಬಗ್ಗೆ NFHS ವರದಿ ಮಾಡಿದೆ.
ಹಲ್ಲೆ ಮಾಡುವ 10 ರಾಜ್ಯಗಳು
ಕರ್ನಾಟಕ – 48%
ಬಿಹಾರ – 43%
ತೆಲಂಗಾಣ- 41%
ಮಣಿಪುರ- 40%
ತಮಿಳುನಾಡು-40%
ಉತ್ತರ ಪ್ರದೇಶ – 39%
ಆಂಧ್ರ ಪ್ರದೇಶ- 34%
ಝಾರ್ಖಂಡ್ – 34%
ಅಸ್ಸಾಂ – 34%
ಒಡಿಸ್ಸಾ-33%