SSLC ವಿದ್ಯಾರ್ಥಿಗಳೇ ನಿಮಗಿದೆ ಗುಡ್ ನ್ಯೂಸ್| ಫೇಲ್ ಆಗುವ ಚಿಂತೆ ಬಿಡಿ, ಸಿಗಲಿದೆ ಗ್ರೇಸ್ ಮಾರ್ಕ್ !

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶ ಎದುರು ನೋಡುತ್ತಿರುವ ವಿದ್ಯಾರ್ಥಿಗಳೇ ನಿಮಗೊಂದು ಭರ್ಜರಿ ಸಿಹಿಸುದ್ದಿ. ಕೆಲವೇ ಅಂಕದಿಂದ ಫೇಲ್ ಆಗುವವರಿಗೋಸ್ಕರ ಸಹಾಯ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಫೆಲಾಗುವುದನ್ನು ಕಡಿಮೆ ಮಾಡಲು ಗರಿಷ್ಠ ಮೂರು ವಿಷಯದಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ.

ಶೇಕಡ 10 ರಷ್ಟು ಕೃಪಾಂಕ ನೀಡಲಾಗುತ್ತದೆ. ಮೂರು ವಿಷಯಗಳಿಗೆ ಒಟ್ಟು ಶೇಕಡ 10 ರಷ್ಟು ಮಾರ್ಕ್ಸ್ ನೀಡಲಾಗುವುದು. ಅನುತ್ತೀರ್ಣಗೊಂಡ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳ ಶೇಕಡ 10 ರಷ್ಟು ಕೃಪಾಂಕಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಉತ್ತಿರ್ಣವಾಗುವುದಾದರೆ ಮಾತ್ರ ಇದರ ಪ್ರಯೋಜನ ಸಿಗಲಿದೆ ಎಂದು ಹೇಳಲಾಗಿದೆ.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ
ವಿದ್ಯಾರ್ಥಿಗಳಿಗೆ 5 ಅಂಕದ ಬದಲಾಗಿ 10 ಕೃಪಾಂಕವನ್ನು ನೀಡಿತ್ತು. ಈ ಬಾರಿ ಕೂಡ ಕೊರೊನಾ ಎರಡನೇ ಅಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ-ಪ್ರವಚನಗಳು ನಡೆಯದಿರುವುದರಿಂದ 10 ಅಂಕಗಳನ್ನು ನೀಡಲಾಗುತ್ತಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷ 50 ಅಂಕಗಳಿಗೆ ಪರೀಕ್ಷೆ ನಡೆಸಿ ಅದನ್ನು 100 ಅಂಕಗಳಿಗೆ ಪರಿವರ್ತಿಸಿ ಅಂಕಗಳನ್ನು ನೀಡಲಾಗಿತ್ತು. ಈ ವರ್ಷ ಪರೀಕ್ಷೆ ನಡೆದಿದ್ದು ಸರಿಯಾದ ಬೋಧನೆ ಸಿಗದ ಮಕ್ಕಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ. 2019ರಲ್ಲಿ ಆರು ವಿಷಯಗಳ ಪೈಕಿ ಎರಡು ವಿಷಯಗಳಿಗೆ 5 ಕೃಪಾಂಕಗಳನ್ನು ನೀಡುವ ನಿಯಮ ಮಾಡಲಾಗಿತ್ತು. ಇದನ್ನು 2020 ಮತ್ತು 2021ರಲ್ಲಿ ಮೂರು ವಿಷಯಗಳಿಗೆ 10 ಅಂಕಗಳನ್ನು ನೀಡುವ ನಿಯಮವನ್ನು ತಾತ್ಕಾಲಿಕವಾಗಿ ರೂಪಿಸಿತ್ತು. ಈ ವರ್ಷ ಕೂಡ ಇದೇ ನಿಯಮವನ್ನು ಮುಂದುವರಿಸಲಿದೆ.

ಮುಂದಿನ ವರ್ಷದಿಂದ (2023) ಹಳೇ ನಿಯಮವೇ ಅಳವಡಿಕೆಯಾಗಲಿದೆ ಎಂದು ತಿಳಿದು ಬಂದಿದೆ.
ಕೃಪಾಂಕಗಳನ್ನು ನೀಡುವುದರಿಂದ 25 ಅಂಕಗಳನ್ನು ಪಡೆದು “ಸಿ’ ಗ್ರೇಡ್‌ನಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಈ ಹಿಂದೆಯೂ ಶೇ.10ರಿಂದ 15ರಷ್ಟು ವಿದ್ಯಾರ್ಥಿಗಳು ಕೃಪಾಂಕಗಳನ್ನು ಪಡೆದಿರುವ ಉದಾಹರಣೆಗಳಿವೆ ಎಂದು ತಿಳಿದು ಬಂದಿದೆ. 2021ರಲ್ಲಿ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು.

1 Comment
  1. Vishal says

    2nd puc 20% grace mark kodbeku justice beku 2022

Leave A Reply

Your email address will not be published.