ಮದುವೆಯಾಗಿ 8 ವರ್ಷದ ನಂತರ, ಮೂರು ಮಕ್ಕಳಾದ ಮೇಲೆ ಕಪ್ಪಗಿದ್ದೀಯಾ, ಸುಂದರವಾಗಿಲ್ಲ ಎಂದ ಗಂಡ, ಆತ್ಮಹತ್ಯೆಗೆ ಶರಣಾದ ಪತ್ನಿ!

ಮದುವೆ ಆಗಿ 8 ವರ್ಷ ಕಳೆದಿದೆ. ಮೂರು ಮಕ್ಕಳೂ ಆಗಿದೆ. ಈಗ ಹೆಂಡತಿ ಹತ್ತಿರ ನೀ ನೋಡಲು ಚೆನ್ನಾಗಿಲ್ಲ ಎಂದು ಮಾನಸಿಕ ಹಿಂಸೆ ನೀಡಿದ್ದರ ಪರಿಣಾಮ ಗೃಹಿಣಿಯೋರ್ವಳು ಸ್ಯಾನಿಟೈಸರ್ ಬಳಸಿ ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

 

ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯ ನಿವಾಸಿ ಶಾಜಿಯ ಬಾನು ಮೃತ ದುರ್ದೈವಿ, ಏಪ್ರಿಲ್ 20ರಂದು ಮನೆಯಲ್ಲೇ ಸಾನಿಟೈಸರ್ ಸುರಿದುಕೊಂಡು ಶಾಜಿಯಾ ಬೆಂಕಿ ಹಚ್ಚಿಕೊಂಡಿದ್ದಳು. ಸುಟ್ಟ ಗಾಯದಿಂದ ಬಳಲುತ್ತಿದ್ದ ಶಾಜಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ (ಮೇ 10) ಕೊನೆಯುಸಿರೆಳೆದಿದ್ದಾಳೆ.

‘ನೀನು ಕಪ್ಪಗಿದ್ದೀಯಾ, ಸುಂದರವಾಗಿಲ್ಲ…’ ಎಂದು ಪತ್ನಿಗೆ ಟಾರ್ಚರ್ ನೀಡಿದ ಪರಿಣಾಮದ ಜೊತೆ ಜೊತೆಗೆ, ಗಂಡನ ಜೊತೆಗೆ, ಆತನ ತಾಯಿಯೂ ಸೊಸೆಗೆ ಹಿಂಸೆ ನೀಡಿದ್ದಾಳೆ. ಆಕೆ ಹೆತ್ತ ಮೂರು ಮಕ್ಕಳ ಜೊತೆ ಬೆರೆಯಲು ಕೂಡಾ ಗಂಡ ಬಿಡುತ್ತಿರದ ಪಾಪಿ ಗಂಡನ ನಡೆಗೆ ಮನನೊಂದ ಪತ್ನಿ, ಮನೆಯಲ್ಲೇ ಮೈ ಮೇಲೆ ಸಾನಿಟೈಸರ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Leave A Reply

Your email address will not be published.