ಅಬ್ಬಾ ! ಪರೋಟಾ ಪಾರ್ಸೆಲ್‌ನಲ್ಲಿ ಹಾವಿನ ಚರ್ಮ ! ದಂಗಾದ ಗ್ರಾಹಕರು

ಹೊರಗಡೆ ಇದ್ದಾಗ ಹಸಿವಾದಾಗ ನಾವು ಸಾಧಾರಣವಾಗಿ ಹೋಟೆಲ್ ಮೊರೆ ಹೋಗ್ತೀವಿ. ಅವರು ಏನು ಕೊಡುತ್ತಾರೋ ಅದನ್ನು ಕಣ್ಣುಮುಚ್ಚಿ ತಿನ್ನುತ್ತೇವೆ. ಆದರೆ ಕೆಲವೊಂದು ಹೋಟೆಲ್ ಗಳಲ್ಲಿ ಅಡುಗೆ ಯಾವ ರೀತಿ ಮಾಡುತ್ತಾರೆ ಎನ್ನುವ ಅರಿವು ನಮಗಿರುವುದಿಲ್ಲ. ಹಾಗಾಗಿಯೇ ಅಲ್ಲೋ ಇಲ್ಲೋ ಕೆಲವು ಕಡೆ ಹೊಟೇಲ್‌ಗಳಲ್ಲಿ ಕಳಪೆ ಆಹಾರವನ್ನು ಪೂರೈಸುವ ಘಟನೆಗಳು ಹೆಚ್ಚಾಗಿವೆ. ಸಾಂಬಾರಿನಲ್ಲಿ ಹಲ್ಲಿ, ಜಿರಳೆ ಬಿದ್ದ ಟೀ ಮುಂತಾದವುಗಳನ್ನು ಪೂರೈಕೆ ಮಾಡಲಾಗುತ್ತದೆ.

 

ಆದರೆ ಇಲ್ಲೊಂದೆಡೆ ಆಹಾರದ ಜೊತೆಗೆ ಬಂದಿರೋ ವಸ್ತುವನ್ನು ನೋಡಿದರೆ ನೀವೂ ದಂಗಾಗುವುದು ಖಂಡಿತ.

ತಿರುವನಂತಪುರಂನ ನೆಡುಮಂಗಡ ಪುರಸಭೆ ವ್ಯಾಪ್ತಿಯ ಹೋಟೆಲ್ ವೊಂದರಲ್ಲಿ ನೀಡಲಾದ ಪಾರ್ಸೆಲ್‌ನಲ್ಲಿ ಗ್ರಾಹಕರಿಗೆ ಪರೋಟಾದ ಜೊತೆ ಹಾವಿನ ಚರ್ಮ ಸಿಕ್ಕಿದೆ.

ಆಹಾರದ ಪಾರ್ಸೆಲ್ ‌ನಲ್ಲಿ ಹಾವಿನ ಚರ್ಮವನ್ನು ಗ್ರಾಹಕರು ಪತ್ತೆ ಮಾಡಿದ ಹಿನ್ನೆಲೆಯಲ್ಲಿ ತಿರುವನಂತಪುರಂನ ನೆಡುಮಂಗಡ ಪುರಸಭೆ ವ್ಯಾಪ್ತಿಯ ಹೋಟೆಲ್ ಅನ್ನು ಗುರುವಾರ ಮುಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚೆಲ್ಲಂಕೋಡ್ ನಿವಾಸಿ ಪ್ರಿಯಾ ಅವರು ಚಂತಮುಕ್ಕಿನ ಶಾಲಿಮಾರ್ ಹೋಟೆಲ್‌ನಿಂದ ಖರೀದಿಸಿದ ಕೆಲವು ಪರೋಟಾಗಳನ್ನು ಪ್ಯಾಕ್ ಮಾಡಲು ಬಳಸಲಾದ ಪತ್ರಿಕೆಯ ತುಣುಕಿನಲ್ಲಿ ಹಾವಿನ ಚರ್ಮವನ್ನು ಕಂಡಿದ್ದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ರೆಸ್ಟೋರೆಂಟ್ ಅನ್ನು ಪರಿಶೀಲಿಸಿ ಅದನ್ನು ಮುಚ್ಚಲು ಆದೇಶ ನೀಡಲಾಗಿದೆಯಂತೆ.

Leave A Reply

Your email address will not be published.