ಉಡುಪಿ : ‘ಎದ್ದು, ಬಿದ್ದು, ಹೋರಾಡಿ, ಗೆದ್ದು ಬಾ ಗೆಳೆಯ’ ಫಸ್ಟ್ ನೈಟ್ ಗೆ ಗೆಳೆಯರಿಂದ ಬ್ಯಾನರ್ ಮೂಲಕ ಶುಭ ಹಾರೈಕೆ

ಉಡುಪಿ : ಯಾವುದೇ ಸಂಭ್ರಮದಲ್ಲಿ ಗೆಳೆಯರ ಬಳಗ ಇಲ್ಲದೇ ಹೋದರೆ ಹೇಗೆ ಹೇಳಿ ?! ಅವರಿದ್ದರೆನೇ ಆಚರಿಸಿ ಕೊಳ್ಳುವ ಸಂಭ್ರಮದ ತಳುಕು ಹೆಚ್ಚಾಗುವುದು. ಅಂದ ಹಾಗೆ ನಾವು ಹೆಚ್ಚಾಗಿ ಈ ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭ ಹಾರೈಸುವುದನ್ನು ನೋಡಿದ್ದೇವೆ. ಹೆಚ್ಚು ಆತ್ಮೀಯರಾಗಿದ್ದರೆ ಅವರ ಕಾಲದ ನಂತರವೂ ಬ್ಯಾನರ್ ಹಾಕಿ ಶ್ರದ್ಧಾಂಜಲಿ ಕೋರಿದ್ದನು ಕಂಡಿದ್ದೇವೆ . ಆದರೆ ಗೆಳೆಯನ ಫಸ್ಟ್ ನೈಟ್ ಗೆ ಶುಭ ಕೋರಿ ಬ್ಯಾನರ್ ಹಾಕಿರುವುದನ್ನು ನೀವು ಕಂಡಿದ್ದೀರಾ ?

 

ಈ ಪ್ರಶ್ನೆ ನಿಮಗೆ ಆಶ್ಚರ್ಯ ಮತ್ತು ಮುಜುಗರ ತಂದರೂ, ಇಂಥಹದೊಂದು ಬ್ಯಾನರ್ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಬ್ಯಾನರ್ ಫೋಟೋ ನೋಡಿ ಕೆಲವರು ಮನದಲ್ಲೇ ನಗಾಡಿದರೆ, ಇನ್ನು ಕೆಲವರು ಅಸಹ್ಯ, ‘ ಎಂಥ ಮಾರ್ರೆ ಇದು ‘ ಅಂದಿರುವುದಂತೂ ನಿಜ. ಈ ಬ್ಯಾನರ್ ಫೋಟೋದಲ್ಲಿ ಕುಚ್ಚೂರು ಎಂದು ಸ್ಥಳದ ಹೆಸರನ್ನು ಬರೆಯಲಾಗಿದೆ. ಬಹುಶಃ ಉಡುಪಿ ಸಮೀಪದ ಕುಚ್ಚುರಿನಲ್ಲಿ ಕುಚುಕು ಗೆಳೆಯರು ಮಾಡಿದ ಕಿತಾಪತಿ ಇದಾಗಿರಬೇಕು !

ಈ ಬ್ಯಾನರ್‌ನಲ್ಲಿ ಯುವಕನೋರ್ವನ ಫುಲ್ ಫೋಟೋ ಕೂಡ ಹಾಕಲಾಗಿದ್ದು, ಮೊದಲ ರಾತ್ರಿಗೆ ಈತನ ಗೆಳೆಯರು ಈ ರೀತಿ ಬ್ಯಾನರ್ ಹಾಕಿ ಶುಭಹಾರೈಸಿದ್ದಾರೆ.

ಗಂಡ ಹೆಂಡತಿಯ ಮಧ್ಯೆ ನಡೆಯುವ ಗೌಪ್ಯ ಕೆಲಸಕ್ಕೆ ಈ ರೀತಿಯ ಒಂದು ಶುಭ ಹಾರೈಕೆ ಮಾಡಿದ ಗೆಳೆಯರ ಧೈರ್ಯ ಮೆಚ್ಚಲೇಬೇಕು.

ನಮ್ಮ ಮುಗ್ಧ ಗೆಳೆಯ ರಸಿಕ. ಗೆಳೆಯನ ಮದುವೆಯ ಪ್ರಪ್ರಥಮ ಮೊದಲ ರಾತ್ರಿಯು ದಿನಾಂಕ ಮೇ 06 ರಂದು ತೋಟದ ಮನೆಯಲ್ಲಿ ನಡೆಯಲಿದ್ದು, ಸ್ಥಳ ಕುಚ್ಚೂರು ಎಂದು ಶುಭ ಸಮಾರಂಭದ ವಿಳಾಸ ಸೂಕ್ಷ್ಮವಾಗಿ ತಿಳಿಸಲಾಗಿದೆ. ಸಮಯ ರಾತ್ರಿ 12 ಗಂಟೆಯಿಂದ ಈ ಫಸ್ಟ್ ನೈಟ್ ಪ್ರಾರಂಭ ಆಗಲಿದ್ದು , ” ಎದ್ದು ಬಿದ್ದು ಹೋರಾಡಿ, ಗೆದ್ದು ಬಾ ಗೆಳೆಯ” ಎಂದು ಸಾಹಿತ್ಯಿಕವಾಗಿ ಪದಬಳಕೆ ಮಾಡಿ ‘ ಕುಚು ಕುಚು ‘ ಸಂದರ್ಭದಲ್ಲಿ ಕ್ರಿಯೇಟಿವಿಟಿ ತೋರಿದ್ದಾರೆ ಕುಚ್ಚೂರಿನ ಕುಚುಕುಗಳು! ಕೊನೆಗೆ ಪ್ರಥಮ ರಾತ್ರಿಗೆ ಶುಭಕೋರುವವರು ಚಿ.ತು.ಸಂಘ ಎಂದು ಬರೆದಿದ್ದಾರೆ. ಚಿ.ತು ಎಂದರೆ ಛೀ ಥೂ ಅಲ್ಲ, ಇದು ಬರೀ ತಮಾಷೆಗಾಗಿ ಗೆಳೆಯರಿಂದ ಗೆಳೆಯನಿಗೆ ಶುಭಹಾರೈಕೆ. ಈ ಹಾಸ್ಯ ಪ್ರಸಂಗದ ಕೊನೆಯಲ್ಲಿ, ಇದೀಗ ಚಿ. ತು. ಅಂದರೆ ಏನಿರಬಹುದು ಎಂಬ ಕುತೂಹಲ ಹುಟ್ಟಿಸಿ ಬಿಟ್ಟಿದ್ದಾರೆ ಕಿಲಾಡಿ ಮಿತ್ರರು. ಮೇ 6 ನೆಯ ತಾರೀಕು ಕಳೆದಿದೆ, ಬಹುಶಃ ಫರ್ಸ್ಟ್ ನೈಟ್ ಸಾಂಗೋಪಾಂಗವಾಗಿ ನಡೆದಿದೆ. ಗೆಳೆಯ ಎದ್ದನಾ ಬಿದ್ದನಾ ಗೊತ್ತಿಲ್ಲ, ಗೆಳೆಯರಂತೂ ಸೋಷಿಯಲ್ ಮೀಡಿಯಾದಲ್ಲಿ ಮನಸ್ಸು ಗೆದ್ದಿದ್ದಾರೆ.

Leave A Reply

Your email address will not be published.