ತಾಯಿ ಸ್ನಾನಕ್ಕೆಂದು ಹೋದಾಗ, ಹೊರಗಿನಿಂದ ಲಾಕ್ ಮಾಡಿ ಕೀ ಎಸೆದ ಬಾಲಕಿ : ಮುಂದೇನಾಯ್ತು ಗೊತ್ತಾ ?

ಮಕ್ಕಳು ಮಾಡುವ ಕಿತಾಪತಿ ಅಷ್ಟಿಷ್ಟಲ್ಲ ಅಂತಾನೇ ಹೇಳಬಹುದು. ಕೆಲವೊಮ್ಮೆ ಈ ಸಣ್ಣಮಕ್ಕಳು ಮಾಡುವ ಆವಾಂತರ ಪೋಷಕರಿಗೆ ಸಮಸ್ಯೆ ತಂದೊಡ್ಡುವುದರಲ್ಲಿ ಸಂಶಯವಿಲ್ಲ. ಇಂಥದ್ದೇ ಒಂದು ಘಟನೆ ನಡೆದಿದ್ದು,
ಬಾಲಕಿಯೊರ್ವಳು ತನ್ನ ತಾಯಿಯನ್ನು ಬಾತ್‌ರೂಮ್‌ನಲ್ಲಿ ಲಾಕ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

 

ಭೋಪಾಲ್‌ನ ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಳಿಕ ಅಕ್ಕಪಕ್ಕದ ಮನೆಯವರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಹೊರಕ್ಕೆ ಕರೆ ತಂದಿದ್ದಾರೆ ಎನ್ನಲಾಗುತ್ತಿದೆ.

ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ್ ಹೋಮ್ಸ್ ಅಪಾರ್ಟ್‌ಮೆಂಟಿನ ನಾಲ್ಕನೇ ಮಹಡಿಯಲ್ಲಿ ನಿಧಿ ಸರತೆ ಎಂಬುವವರು ತನ್ನ ಪತಿ ಮತ್ತು ಒಂದೂವರೆ ವರ್ಷದ ಮಗಳು ಮಾನ್ಯಳೊಂದಿಗೆ ವಾಸಿಸುತ್ತಿದ್ದು, ಆಕೆಯ ಪತಿ ಚಾಲಕನಾಗಿದ್ದು, ಕೆಲಸಕ್ಕೆ ತೆರಳಿದ್ದರು. ಒಂದು ದಿನ ಬಾಲಕಿ ಆಟವಾಡುತ್ತಿದ್ದಾಗ, ತಾಯಿ ನಿಧಿ ಬಾತ್ ರೂಮ್‌ಗೆ ತೆರಳಿದ್ದರು. ಆಗ ಬಾಲಕಿ ತಾಯಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾಳೆ. ಬಳಿಕ ಮಹಿಳೆ ಸ್ನಾನದ ಬಾಗಿಲು ಮುಚ್ಚಿದ್ದಾರೆ. ಆಗ ಬಾಲಕಿ ಹೊರಗಿನಿಂದ ಸ್ನಾನದ ಕೋಣೆಯನ್ನು ಲಾಕ್ ಮಾಡಿ ಕೀಯನ್ನು ಎಲ್ಲೋ ಎಸೆದಿದ್ದಾಳೆ. ಇದರಿಂದ ಬಾತ್ ರೂಮ್ ಹೊರಗಿನಿಂದ ಲಾಕ್ ಆಗಿತ್ತು.

ಮಹಿಳೆ ಎಷ್ಟೇ ಪ್ರಯತ್ನಿಸಿದರೂ ಸ್ನಾನದ ಕೋಣೆಯ ಬಾಗಿಲು ತೆರಲಿಲ್ಲ. ಕೂಡಲೇ ಮಹಿಳೆ ಬಾತ್ ರೂಮಿನ ಕಿಟಕಿಯ ಮೂಲಕ ಜೋರಾಗಿ ಕೂಗಿದ್ದಾರೆ. ಆಕೆಯ ಕೂಗಾಟ ಕೇಳಿದ ನೆರೆ-ಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಲಾಕ್ ಆಗಿದ್ದ ಬಾಗಿಲನ್ನು ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸುಮಾರು ಒಂದು ಗಂಟೆ ಕಾರ್ಯಾಚರಣೆ ಬಳಿಕ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.