ನಮಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಮುಸ್ಲಿಮರು!

‘ಮರಣ’ ಎಲ್ಲರಿಗೂ ಬರುತ್ತೆ. ಸಾವು ಖಚಿತ. ಆದರೆ ನೊಂದ ಜೀವಗಳು ತಮಗೆ ಬದುಕಲು ಇಷ್ಟವಿಲ್ಲ ನಮಗೆ ಇಚ್ಛಾಮರಣ ಕೊಡಿ, ಎಂದು ಅವಲತ್ತುಕೊಂಡರೆ? ಇಂಥ ಒಂದು ಮರಣವನ್ನು ನೀಡಲು ಮುಸ್ಲಿಂಮರು ಕಾನೂನಿನ ಮೊರೆ ಹೋಗಿದ್ದಾರೆ.

 

ಮೀನುಗಾರಿಕೆಯಲ್ಲಿ ತೊಡಗಿರುವ ಈ ಕುಟುಂಬಗಳು ತಾವು ಸಾಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿವೆ. 2016 ರಿಂದ ಪೋರಬಂದರ್‌ನ ಗೋಸಾಬರ ಬಂದರಿನಲ್ಲಿ ದೋಣಿ ನಿಲುಗಡೆಯನ್ನು ಸರ್ಕಾರ ನಿಷೇಧಿಸಿದೆ. ಈ ನಿಷೇಧದಿಂದ ತೊಂದರೆಗೀಡಾಗಿರುವ ಹಿನ್ನೆಲೆಯಲ್ಲಿ ತಾವು ಸಾಯಬೇಕಿದೆ ಎಂದು ಅವರು ಹೇಳಿದ್ದಾರೆ.

ಮೀನುಗಾರಿಕೆ ಮತ್ತು ಬೋಟಿಂಗ್ ಪರವಾನಗಿ ಇದ್ದರೂ ತಮ್ಮ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎನ್ನುವುದು ಈ ಮುಸ್ಲಿಂ ಕುಟುಂಬಗಳ ಆರೋಪ. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ರಾಜ್ಯಪಾಲರು, ಮುಖ್ಯಮಂತ್ರಿಗಳು, ಪೋರಬಂದರ್ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ ಎನ್ನುವುದು ಇವರ ಆರೋಪ. ಸದ್ಯ ಹೈಕೋರ್ಟ್‌ಗೆ ರಜೆ ಇದ್ದು, ರಜಾ ದಿನಗಳು ಮುಗಿದ ನಂತರ ಈ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ನಾವೆಲ್ಲಾ ಸಾಯಬೇಕು, ನಮಗೆ ದಯಾಮರಣ ಕೊಡಿ… ಹೀಗೆಂದು 100 ಮುಸ್ಲಿಂ ಕುಟುಂಬಗಳು ಅಹಮದಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Leave A Reply

Your email address will not be published.