ತನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕೈಗೆ ಕೋಳ ಹಾಕಿ ಜೈಲಿಗಟ್ಟಿದ ಸಬ್ ಇನ್ಸ್ ಪೆಕ್ಟರ್ ಮಹಿಳೆ!

Share the Article

ಆಕೆ ವೃತ್ತಿಯಲ್ಲಿ ಸಬ್ ಇನ್ಸ್ ಪೆಕ್ಟರ್, ಈಗಾಗಲೇ ನಿಶ್ಚಿತಾರ್ಥವಾಗಿದ್ದು, ನವೆಂಬರ್ ನಲ್ಲಿ ಮದುವೆ ಎಂದು ಹಿರಿಯರೆಲ್ಲರೂ ನಿರ್ಧಾರ ಮಾಡಿದ್ದರು. ಆದರೆ ವಿಪರ್ಯಾಸ ಏನು ಗೊತ್ತೇ? ಆಕೆ ಮದುವೆ ಆಗಬೇಕಾದ ಹುಡುಗನನ್ನೇ ತಾನೇ ಖುದ್ದಾಗಿ ಅರೆಸ್ಟ್ ಮಾಡುವ ಸಂದರ್ಭ ಮುಂದೆ ಬರುತ್ತೆ ಅನ್ನೋ ಒಂದೇ ಒಂದು ಕ್ಲೂ ಕೂಡಾ ಆ ಧೀರ ಮಹಿಳೆಗೆ ಗೊತ್ತಿರಲಿಲ್ಲ. ಇದೊಂದು ಘಟನೆ ಯಾವುದೇ ಸಿನಿಮಾ ಸ್ಟೋರಿಗೂ ಕಮ್ಮಿ ಇಲ್ಲ. ಘಟನೆಯ ವಿವರ ಈ ಕೆಳಗೆ ನೀಡಲಾಗಿದೆ.

ಈ ಕಥೆಯ ನಾಯಕನೇ ರಾಣಾ ಪೊಗಾಗ್. ನಾಯಕಿ ಕಮ್ ಸಬ್ ಇನ್ಸ್ ಪೆಕ್ಟರ್ ಜುನ್ನೋನಿ ರಾಭಾ.
ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್‌ಜಿಸಿ) ನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ರಾಣಾ ಪೊಗಾಗ್ ಹಲವರಿಗೆ ವಂಚಿಸಿದ ವಿಷಯ ಗೊತ್ತಿಲ್ಲದ ಸಬ್ ಇನ್ಸ್ ಪೆಕ್ಟರ್ ನಾಗಾವ್ ಜಿಲ್ಲೆಯ ಜುನ್ನೋನಿ ರಾಭಾ ಕಳೆದ ಅಕ್ಟೋಬರ್ ನಲ್ಲಿ ಆತನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಆದರೆ ಈ ಖುಷಿ ನೀರಿನ ಇದೀಗ ಈತನ ವಂಚನೆ ಬಯಲಾಗಿದ್ದು, ಸ್ವತಃ ಭಾವಿ ಪತಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಿದ್ದಾರೆ.

ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದ ಜುನ್ನೋನಿ ರಾಭಾ ಅವರಿಗೆ ತಾನೊಬ್ಬ ಒಎನ್‌ಜಿಸಿ ಅಧಿಕಾರಿ ಎಂದು ಈತ ಪರಿಚಯಿಸಿಕೊಂಡು ಮದುವೆ ಆಗಲು ಬಂದಿದ್ದನಂತೆ. ಆತ ಕಳ್ಳ ಎಂದು ತಿಳಿದ ತಕ್ಷಣ ಎಫ್‌ಐಆರ್ ದಾಖಲಿಸಿದ್ದೇನೆ. ಅವನು(ರಾಣಾ ಪೊಗಾಗ್) ಎಷ್ಟು ದೊಡ್ಡ ವಂಚಕ ಎಂದು ತಿಳಿಸಲು ನನ್ನ ಬಳಿಗೆ ಬಂದ ಮೂರು ಜನರಿಗೆ ನಾನು ತುಂಬಾ ಋಣಿಯಾಗಿರುವೆ. ಅವರು ನನಗೆ ನಿಜ ವಿಷಯ ಅರಿಯಲು ಕಾರಣ, ಎಂದು ಜುನ್ನೋನಿ ರಾಭಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಣಾನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

Leave A Reply