SSLC ಫೇಲಾದೆ ಎಂಬ ಚಿಂತೆ ಬಿಡಿ, ನಿಮ್ಮ ಜೀವನ ಹಸನಾಗಿಸಲು ಇಲ್ಲಿದೆ ಟಾಪ್ ಕೋರ್ಸ್!

SSLC ಎನ್ನುವುದು ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟ. 10 ನೇ ತರಗತಿ ನಂತರ ವಿದ್ಯಾರ್ಥಿಗಳು ಎದುರಿಸುವ ಪ್ರಮುಖ ಸಮಸ್ಯೆ ಎಂದರೆ ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎಂಬ ಪ್ರಶ್ನೆ ಪೆಡಂಭೂತದ ಹಾಗೇ ಕಾಡುತ್ತದೆ. ಯಾವ ಕೋರ್ಸ್ ಮುಂದೆ ಭವಿಷ್ಯಕ್ಕಾಗಿ ಒಳ್ಳೆಯದು ಎಂಬ ಗೊಂದಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಕಾಡುತ್ತಿರುತ್ತದೆ.

 

ಹಾಗೆಯೇ ಎಸ್ಎಸ್ಎಲ್ಸಿ ಫೇಲಾದ ವಿದ್ಯಾರ್ಥಿಗಳಿಗೂ ಇದೇ ಗೊಂದಲ ತುಂಬಾನೇ ಕಾಡುತ್ತದೆ. 10th ಫೇಲಾದ ವಿದ್ಯಾರ್ಥಿಗಳು ಹೆಚ್ಚಾಗಿ ಸಮಾಜಕ್ಕೆ ಹೆದರಿಯೋ, ಹೆತ್ತವರಿಗೆ ಹೆದರಿಯೋ ಆತ್ಮಹತ್ಯೆ ಮಾಡಿಕೊಳ್ಳುವ ಎಷ್ಟೋ ವರದಿಗಳು ಬರುವುದು ನೋಡಿದ್ದೇವೆ. ದೇಶದಲ್ಲಿ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಫೇಲಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಎಸ್‌ಎಸ್‌ಎಲ್‌ಸಿ ಫೇಲಾದರೆ ಜೀವನವೇ ಮುಗಿಯಿತು ಎನ್ನುವ ಕಾಲ ಮುಗಿದೋಗಿದೆ. ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ವಿದ್ಯಾರ್ಥಿಗಳೇ ಆತಂಕ ಪಡಬೇಡಿ. ನಿಮಗಾಗಿ ಮುಂದಿನ ಜೀವನ ರೂಪಿಸಲು ಕೆಲವು ಕೋರ್ಸ್ ಗಳಿದ್ದು ಅವುಗಳನ್ನು ನೀವು ಕಲಿತು ನಿಮ್ಮ ಜೀವನವನ್ನು ಹಸನಾಗಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.

1.ಬ್ಯೂಟಿಷಿಯನ್ ಕೋರ್ಸ್
2.ಬೇಕರಿ ತಂತ್ರಜ್ಞಾನ
3.ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್
4.ನರ್ಸಿಂಗ್ ಕೋರ್ಸ್
5.ವಾಹನ ಚಾಲನೆ ತರಬೇತಿ
6.ಕೃಷಿಗೆ ಸಂಬಂಧಿಸಿದ ಕೋರ್ಸ್‌ಗಳು
7.ಅರಣ್ಯ ಕೃಷಿ ತರಬೇತಿ
8.ಹೈನುಗಾರಿಕೆ ತರಬೇತಿ
9.ಜೇನುಗಾರಿಕೆ ತರಬೇತಿ
10.ಮತ್ಸ್ಯೋದ್ಯಮ ತರಬೇತಿ
11.ಕುಕ್ಕುಟೋದ್ಯಮ ತರಬೇತಿ
12.ಕುರಿಸಾಕಣೆ ತರಬೇತಿ

ಸೌಂದರ್ಯಕ್ಕೆ ಪ್ರಾಮುಖ್ಯತೆ ಜನ ತುಂಬಾನೇ ನೀಡುತ್ತಾರೆ. ಜಗತ್ತು ಮುಂದುವರಿತಾ ಇದ್ದರೂ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಈ ಕೋರ್ಸ್‌ನ್ನು ಕಲಿಯುವುದರ ಮೂಲಕ ನೀವು ಸ್ವಂತ ಉದ್ಯೋಗವನ್ನು ರೂಪಿಸಿಕೊಳ್ಳಬಹುದು.

ಬೇಕರಿ ಉದ್ಯಮ ಇದನ್ನು ಎಸ್ ಎಸ್ ಎಲ್ ಸಿ ಪಾಸಾದವರು, ಫೇಲ್ ಆದವರು ಕಲಿಯಬಹುದು. ಇದರ ಕುರಿತು ಸುಮಾರು ಹದಿನಾಲ್ಕು ವಾರಗಳ ಕಾಲ ತರಬೇತಿ ನೀಡಲಾಗುತ್ತದೆ. ಈ ಕೋರ್ಸ್ ಕಲಿಯುವ ಮೂಲಕ ನೀವು ಸ್ವಂತ ಉದ್ಯೋಗವನ್ನು ಮಾಡಬಹುದು ಅಥವಾ ಬೇಕರಿ, ಹೋಟಲ್‌ಗಳಲ್ಲಿ ಉದ್ಯೋಗ ಪಡೆಯಬಹುದು.

ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಈ ಕೋರ್ಸ್‌ನ್ನು ಎಸ್‌ಎಸ್‌ಎಲ್‌ಸಿ ಫೇಲಾದ ವಿದ್ಯಾರ್ಥಿಗಳು ಕೂಡಾ ಮಾಡಬಹುದಾಗಿದೆ. ಎಸ್ಎಸ್ಎಲ್ಸಿ ಫೇಲಾದವರಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ನೀವು ಹೌಸ್‌ಕೀಪಿಂಗ್ ಬಗ್ಗೆ ಕ್ಯಾಟರಿಂಗ್ ಟೆಕ್ನಾಲಜಿ ಕುರಿತು ತರಬೇತಿ ನೀಡಲಾಗುತ್ತದೆ. ಈ ತರಬೇತಿ ಪಡೆದವರಿಗೆ ಉದ್ಯೋಗ ಅವಕಾಶಗಳು ಅಧಿಕ.

ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ನರ್ಸಿಂಗ್ ಕೋರ್ಸ್ ಓದಲು ಅವಕಾಶವಿದೆ. ಒಂದು ವರ್ಷ, ಆರು ತಿಂಗಳ, ಮೂರು ತಿಂಗಳ, ಡಿಪ್ಲೊಮಾ ಕೋರ್ಸ್ ಅಧ್ಯಯನ ಮಾಡಬಹುದಾಗಿದೆ. ಈ ಕೋರ್ಸ್ ನಂತರ ನೀವು ಯಾವ ಡಿಪ್ಲೊಮಾ ಕೋರ್ಸ್ ಅಧ್ಯಯನ ಮಾಡಬಹುದು ಅದರ ಆಧಾರದ ಮೇಲೆ ಹಲವು ಉದ್ಯೋಗವಕಾಶಗಳಿವೆ.

ಎಸ್‌ಎಸ್‌ಎಲ್‌ಸಿ ಫೇಲಾದ ವಿದ್ಯಾರ್ಥಿಗಳು ವಾಹನ ಚಾಲನೆ ತರಬೇತಿ ಪಡೆದು ಸ್ವಯಂ ಉದ್ಯೋಗ ಮಾಡಬಹುದು. ಸರ್ಕಾರದಿಂದ ಕೂಡಾ ವಾಹನ ಚಾಲನೆ ತರಬೇತಿಯನ್ನು ನೀಡಲಾಗುತ್ತದೆ. ಅದು ಅರ್ಹ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ. ಉಳಿದವರು ಖಾಸಗಿ ವಾಹನ ಚಾಲನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು, ಸ್ವಯಂ ಉದ್ಯೋಗ ಆರಂಭಿಸಬಹುದಾಗಿದೆ.

ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಸರ್ಕಾರವು ಇಂತಹ ತರಬೇತಿಗಳನ್ನು ನೀಡಲಾಗುತ್ತಿದೆ. ಈ ತರಬೇತಿಯಲ್ಲಿ ಮರಗಳನ್ನು ರಕ್ಷಿಸಿಸುವ ಬಗ್ಗೆ, ಜಮೀನುಗಳಲ್ಲಿ ಯಾವ ತರಹದ ಗಿಡ ಮರಗಳನ್ನು ಬೆಳಸಬೇಕು ಅದರ ಲಾಭಗಳೇನು ಎನ್ನುವುದರ ಕುರಿತು ತರಬೇತಿ ನೀಡಲಾಗುತ್ತದೆ.

ಹೈನುಗಾರಿಕೆ ಕೂಡಾ ಒಂದು ಲಾಭದಾಯಕ ಉದ್ಯಮ. ಸರ್ಕಾರದಿಂದಲೇ ಹೈನುಗಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಮತ್ತು ನೀವು ಹೊಸದಾಗಿ ಈ ಉದ್ಯಮ ಆರಂಭಿಸಬೇಕಾದರೆ ಸರ್ಕಾರ ನಿಮಗೆ ನೆರವು ನೀಡುತ್ತದೆ. ಅಲ್ಲದೆ ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಕೂಡಾ ಸಿಗುತ್ತದೆ.

ಜೇನುಗಾರಿಕೆ ತರಬೇತಿ, ಮತ್ಸ್ಯೋದ್ಯಮ ತರಬೇತಿ ,ಕುಕ್ಕುಟೋದ್ಯಮ ತರಬೇತಿ, ಕುರಿಸಾಕಣೆ ತರಬೇತಿ ಈ ಎಲ್ಲಾ ತರಬೇತಿಗಳನ್ನು ಸರ್ಕಾರದಿಂದ ನೀಡಲಾಗುತ್ತದೆ. ಈ ಎಲ್ಲಾ ಉದ್ಯಮ ತರಬೇತಿಗಳು ಲಾಭದಾಯಕವಾಗಿದ್ದು, ನೀವು ಈ ತರಬೇತಿಗಳನ್ನು ಪಡೆದು ಸ್ವಯಂ ಉದ್ಯೋಗ ಮಾಡಬಹುದಾಗಿದೆ. ಈ ಉದ್ಯೋಗಗಳನ್ನು ಆರಂಭಿಸಲು ನಿಮಗೆ ಸರ್ಕಾರದಿಂದ
ನೆರವು ಜೊತೆಗೆ ಅಲ್ಲದೆ ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಕೂಡಾ ಸಿಗುತ್ತದೆ.

Leave A Reply

Your email address will not be published.