Home ಬೆಂಗಳೂರು ಟಿಕ್ ಟಾಕ್ ನಲ್ಲಿ ಮೂಡಿದ ಪ್ರೇಮ|ಮನೆ ಬಿಟ್ಟು,ನಂಬಿ ಬಂದ ಯುವತಿಗೆ ಕೈ ಕೊಟ್ಟು ಹಣದೊಂದಿಗೆ ಯುವಕ...

ಟಿಕ್ ಟಾಕ್ ನಲ್ಲಿ ಮೂಡಿದ ಪ್ರೇಮ|ಮನೆ ಬಿಟ್ಟು,ನಂಬಿ ಬಂದ ಯುವತಿಗೆ ಕೈ ಕೊಟ್ಟು ಹಣದೊಂದಿಗೆ ಯುವಕ ಪರಾರಿ!

Hindu neighbor gifts plot of land

Hindu neighbour gifts land to Muslim journalist

ಟಿಕ್‌ಟಾಕ್‌ನಲ್ಲಿ ರೀಲ್ಸ್ ಮಾಡಿ ಯುವತಿಯೋರ್ವಳನ್ನು ಪ್ರೀತಿಯ ಬಲೆಗೆ ಬೀಳಿಸಿದ ಯುವಕನೋರ್ವ ಮದುವೆಯಾದ ನಂತರ ಬಿಟ್ಟು ಹೋದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ರಮೇಶ್ ಎಂಬಾತ ಹುಬ್ಬಳ್ಳಿ ಮೂಲದ ಯುವತಿಯ ಜೊತೆ ಟಿಕ್‌ಟಾಕ್‌ನ ಮೂಲದಿಂದ ಪರಿಚಯ ಮಾಡಿಕೊಂಡಿದ್ದ. ಹೀಗೆ ಇನ್ಸ್ಟಾ ರೀಲ್ಸ್‌ನಲ್ಲೂ ಯುವತಿಗೆ ಆಕರ್ಷಿಸುವಂತೆ ಆಗುವಂತೆ ವೀಡಿಯೋ ಮಾಡಿ, ಬುಟ್ಟಿಗೆ ಹಾಕಿದ್ದ. ನಂತರ ಪ್ರೀತಿ, ಪ್ರೇಮದ ನಾಟಕವಾಡಿದ್ದ. ನನಗೆ ನೀನೇ ಬೇಕು ಎಂದು ಪುಸಲಾಯಿಸಿ ಮದುವೆ ಕೂಡಾ ಆಗಿದ್ದಾನೆ. ಈತನ ಮಾತಿಗೆ, ಸಂಪೂರ್ಣ ಮರುಳಾಗಿ ಯುವತಿ ಮನೆ, ಪೋಷಕರನ್ನು ಬಿಟ್ಟು ಚಿನ್ನಾಭರಣ, ಹಣ ಸಮೇತ ಬೆಂಗಳೂರಿಗೆ ಬಂದಿದ್ದಳು.

ನಗರದಲ್ಲೇ ಬಾಡಿಗೆ ಮನೆಯಲ್ಲಿ ಸ್ವಲ್ಪ ಸಮಯ ಅವಳ ಜೊತೆ ಬಾಡಿಗೆ ಮನೆಯಲ್ಲಿದ್ದ ಈತ ಬ್ಯುಸಿನೆಸ್ ನೆಪದಲ್ಲಿ ಆಕೆಯ ಬಳಿಯಿದ್ದ ಚಿನ್ನಾಭರಣಗಳೆಲ್ಲವನ್ನೂ ಮಾರಾಟ ಮಾಡಿದ್ದು, ಅವಳ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಸಾಲ ಕೂಡ ಪಡೆದು ಖರ್ಚು ಮಾಡಿದ್ದ.

ಹಣವೆಲ್ಲ ಖಾಲಿಯಾದ ನಂತರ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಗಂಡನನ್ನು ಹುಡುಕಿಕೊಡುವಂತೆ ಹುಡುಗಿ ಕೆ.ಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.