ಡ್ರಗ್ಸ್ ನೀಡಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಜಿಮ್ ಟ್ರೈನರ್ ಸೈಯ್ಯದ್ ಸಿದ್ದಿಕಿ!! ಸಂತ್ರಸ್ತ ಯುವತಿಯಿಂದ ಪೊಲೀಸರಿಗೆ ದೂರು-ಆರೋಪಿಯ ಬಂಧನ

ಬೆಂಗಳೂರು: ಮುಂಬೈ ಮೂಲದ ಯುವತಿಯೊಬ್ಬಳಿಗೆ ಬಾಡಿ ಬಿಲ್ಡ್ ಮಾಡುವ ಉದ್ದೇಶದಿಂದ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು,ಪ್ರಕರಣ ದಾಖಲಾದ ಕೂಡಲೇ ಆರೋಪಿ ಬಾಡಿ ಬಿಲ್ಡಿರ್ ಸೈಯ್ಯದ್ ಸಿದ್ದಿಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

 

ಘಟನೆ ವಿವರ:ಮುಂಬೈ ಮೂಲದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಆರೋಪಿ ಸಿದ್ದಿಕಿ, ಬಾಡಿ ಬಿಲ್ಡ್ ಮಾಡಲು ಟ್ರೈನ್ ನೀಡುವುದಾಗಿ ನಂಬಿಸಿದ್ದ. ಅದರಂತೆ ಯುವತಿ ಮುಂಬೈ ಇಂದ ಬೆಂಗಳೂರಿಗೆ ಬಂದಿದ್ದು, ಸಿದ್ದಿಕಿಯನ್ನು ಭೇಟಿಯಾಗಿದ್ದಳು.

ಬಳಿಕ ಸಿದ್ದಿಕಿಯ ಜಿಮ್ ಗೆ ಜಾಯಿನ್ ಆದ ಯುವತಿಗೆ ಒಂದೆರಡು ದಿನ ವ್ಯಾಯಾಮಗಳನ್ನು ಹೇಳಿಕೊಟ್ಟಿದ್ದ ಸಿದ್ದಿಕಿ, ಬಳಿಕ ಸ್ಟಿರಾಯ್ಡ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ. ಇದಕ್ಕೆ ಯುವತಿ ಒಪ್ಪಿದಾಗ ಆರೋಪಿ ಆಕೆಗೆ ಡ್ರಗ್ಸ್ ನೀಡಿದ್ದು, ಯುವತಿಯ ಮನೆಗೆ ಬಂದು ಮದುವೆಯಾಗುವುದೆಂದು ನಂಬಿಸಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಯುವತಿ ನೀಡಿದ ದೂರನಂತೆ ಕೆ.ಜೆ ಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ಟ್ರೈನರ್ ಸಿದ್ದಿಕಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.