Home Education ಪ್ರತಿ ಮಗುವಿನ ಮೊಗದಲ್ಲಿ ನಗು ಮೂಡಿಸಿತು ಶಿಕ್ಷಕ ಇರಿಸಿದ ಬಾಕ್ಸ್!

ಪ್ರತಿ ಮಗುವಿನ ಮೊಗದಲ್ಲಿ ನಗು ಮೂಡಿಸಿತು ಶಿಕ್ಷಕ ಇರಿಸಿದ ಬಾಕ್ಸ್!

Hindu neighbor gifts plot of land

Hindu neighbour gifts land to Muslim journalist

ಮಕ್ಕಳೆಂದರೆ ಚೇಷ್ಟೆ ಅನ್ನುವುದಕ್ಕಿಂತಲೂ ಮುಗ್ಧ ಎಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆ ಪುಟಾಣಿಗಳಿಗೆ ಜಗತ್ತಲ್ಲಿ ಏನು ನಡೆಯುತ್ತೆ ಎಂಬ ಅರಿವಿಲ್ಲದೆ ಪ್ರತಿಯೊಂದು ಕ್ಷಣವನ್ನು ಮನಸಾರೆ ಅನುಭವಿಸಿ ಬಾಲ್ಯ ಜೀವನವನ್ನು ಸುಂದರವಾಗಿಸುತ್ತಾರೆ. ಪ್ರತಿಯೊಂದು ಮಗುವಿಗೂ ತನ್ನನ್ನು ಯಾರಾದರೂ ಹೊಗಳಿದರೆ ಅದರಿಂದ ಆಗುವ ಖುಷಿ ಬೇರೊಂದಿಲ್ಲ.

ಸಾಮಾನ್ಯವಾಗಿ ಶಾಲೆ ಅಂದ ಮೇಲೆ ಪ್ರತಿಯೊಬ್ಬ ಶಿಕ್ಷಕ, ಮಕ್ಕಳಿಗೂ ನೆಚ್ಚಿನ ವಿದ್ಯಾರ್ಥಿ, ನೆಚ್ಚಿನ ಶಿಕ್ಷಕ ಎಂಬುದು ಇದ್ದೇ ಇರುತ್ತದೆ. ಅದ್ರಲ್ಲೂ ನಾನೆ ಟೀಚರ್ ಗೆ ಆತ್ಮೀಯನಾಗಬೇಕು ಎಂಬುದು ಹೆಚ್ಚೇ. ಆದ್ರೆ ಶಿಕ್ಷಕನಿಗೆ ತನ್ನೆಲ್ಲ ವಿದ್ಯಾರ್ಥಿಗಳು ನಗು-ನಗುತ್ತಲೇ ಇರಬೇಕು ಎಂಬುದು ಆಸೆ.ಇದೀಗ ಇಂತಹುದೇ ಒಂದು ಇಂಟೆರೆಸ್ಟಿಂಗ್ ವಿಡಿಯೋ ಶಿಕ್ಷಕನೇ ಪೋಸ್ಟ್ ಮಾಡಿದ್ದು, ಅನೇಕರ ಮೆಚ್ಚುಗೆಗೆ ಪಾತ್ರರಾಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬುದು ಇಲ್ಲಿ ನೋಡಿ..

ಹುಲುಸಿ ಆಕೀರ್ ಎಂಬ ಶಿಕ್ಷಕ ತನ್ನ ನವೀನ ಮತ್ತು ಆರೋಗ್ಯಕರ ಶೈಕ್ಷಣಿಕ ತಂತ್ರಗಳಿಂದಾಗಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.ಟರ್ಕಿ ಮೂಲದ ಈ ವ್ಯಕ್ತಿಯು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವಂತಹ ಫೋಟೋಗಳು ಮತ್ತು ವಿಡಿಯೋಗಳು ಆಗಾಗ್ಗೆ ಒಳ್ಳೆಯ ಕಾರಣಗಳಿಗಾಗಿ ವೈರಲ್ ಆಗುತ್ತವೆ. ಈ ಬಾರಿಯು ವೈರಲ್ ಆಗಿರುವ ಮತ್ತು ಅವರ ಪುಟದಿಂದ ಹಂಚಿಕೊಳ್ಳಲಾದ ವಿಡಿಯೋವನ್ನು ಎಲ್ಲರೂ ಮಿಸ್ ಮಾಡದೆ ನೋಡಬೇಕಾದದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ವಿಡಿಯೋ ಶುರುವಾದಾಗ ಆರಂಭದಲ್ಲಿ ಹಲವಾರು ವಿದ್ಯಾರ್ಥಿಗಳು ತರಗತಿಯಲ್ಲಿ ಒಬ್ಬೊಬ್ಬರಾಗಿ ಬಂದು ಅಲ್ಲೇ ತರಗತಿಯ ಮುಂದೆ ಇರಿಸಲಾದ ಒಂದು ಪೆಟ್ಟಿಗೆಯನ್ನು ನೋಡುತ್ತಿರುವುದನ್ನು ನಾವು ನೋಡಬಹುದು. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಬಂದು ಆ ಪೆಟ್ಟಿಗೆಯಲ್ಲಿ ಇಣುಕಿ ನೋಡಿದಾಗ ಪ್ರತಿಯೊಬ್ಬ ವಿದ್ಯಾರ್ಥಿಯ ಮುಖದ ಮೇಲೆ ಮಧುರವಾದ ಮುಗುಳ್ನಗೆ ಇರುವುದನ್ನು ನಾವು ವಿಡಿಯೋ ಮುಂದುವರೆದಂತೆ ನೋಡಬಹುದು. ಬಹುಶಃ ಈ ಸಂದರ್ಭವು ಈ ವಿಡಿಯೋದ ಅತ್ಯಂತ ಮುದ್ದಾದ ಭಾಗವೆಂದು ಹೇಳಬಹುದು.

ಈ ವಿಡಿಯೋಗೆ ಟರ್ಕಿ ಭಾಷೆಯಲ್ಲಿ ಶೀರ್ಷಿಕೆಯನ್ನು ಬರೆಯಲಾಗಿದ್ದು,’ ಈ ತರಗತಿಯ ಶಿಕ್ಷಕನು ತನ್ನ ನೆಚ್ಚಿನ ವಿದ್ಯಾರ್ಥಿಯ ಫೋಟೋವನ್ನು ಈ ಒಂದು ಪೆಟ್ಟಿಗೆಯಲ್ಲಿ ಹಾಕಿದ್ದಾರೆ ಎಂದು ತನ್ನ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ’.ಇದು ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಖುಷಿ ಪಡಿಸಿತು. ಏಕೆಂದರೆ ಅವರೆಲ್ಲಾ ಹೋಗಿ ಆ ಪೆಟ್ಟಿಗೆಯಲ್ಲಿ ಒಬ್ಬೊಬ್ಬರಾಗಿ ಇಣುಕಿ ನೋಡಿ ಆ ನೆಚ್ಚಿನ ವಿದ್ಯಾರ್ಥಿಯ ಫೋಟೋವನ್ನು ನೋಡಿ ಹೋದರು. ಅಷ್ಟಕ್ಕೂ ಮಕ್ಕಳ ಮೊಗದಲ್ಲಿ ನಗು ತರಿಸಿದ ಆ ಬಾಕ್ಸ್ ನಲ್ಲಿ ಏನಿತ್ತು!?

ಆ ಪೆಟ್ಟಿಗೆಯಲ್ಲಿರುವ ಒಂದು ವಿದ್ಯಾರ್ಥಿಯ ಫೋಟೋ ಹೇಗೆ ತರಗತಿಯ ಎಲ್ಲಾ ಮಕ್ಕಳಿಗೆ ಖುಷಿ ನೀಡಿತು. ಕಾರಣ?.ಈ ವಿಡಿಯೋದ ಕೊನೆಯಲ್ಲಿ, ಶಿಕ್ಷಕನು ಈ ಪೆಟ್ಟಿಗೆಯಲ್ಲಿ ಯಾರ ಫೋಟೋವನ್ನು ಇಟ್ಟಿಲ್ಲ, ಬದಲಾಗಿ ಒಂದು ಕನ್ನಡಿಯನ್ನು ಇಟ್ಟಿದ್ದಾನೆ ಮತ್ತು ಇದು ಎಲ್ಲಾ ವಿದ್ಯಾರ್ಥಿಗಳ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂಬ ಅಂಶದಿಂದ ಪ್ರತಿ ಮಗುವು ಹೇಗೆ ಆಹ್ಲಾದಕರವಾಗಿ ಆಶ್ಚರ್ಯಚಕಿತವಾಯಿತು ಎಂಬುದನ್ನು ನಾವು ಇಲ್ಲಿ ನೋಡಬಹುದು ಎಂದಿದ್ದಾರೆ.

ಈ ವಿಡಿಯೋವನ್ನು ಒಂದು ವಾರದ ಹಿಂದೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ, ಇಲ್ಲಿಯವರೆಗೆ ಈ ಸೂಪರ್ ವಿಡಿಯೋವನ್ನು ನೋಡಿದ ಜನರಿಂದ ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಇದು 1.6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು 87,000ಕ್ಕೂ ಹೆಚ್ಚು ಲೈಕ್‌ಗಳನ್ನು ಸಹ ಪಡೆಯುವುದಲ್ಲದೆ, ಹಲವಾರು ಹೃದಯಸ್ಪರ್ಶಿ ಕಾಮೆಂಟ್‌ಗಳನ್ನು ಸಹ ಪಡೆದಿದೆ.