ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿ ಮುಸ್ಲಿಮರ ದಿಕ್ಕು ತಪ್ಪಿಸುತ್ತಿದೆ !! | ಪಿಎಫ್ಐ ವಿರುದ್ಧ ಗಂಭೀರ ಆರೋಪ ಮಾಡಿದ ಹಜ್ ಸಮಿತಿ ಅಧ್ಯಕ್ಷ ಶೇಖ ಜೀನಾ

Share the Article

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ದೇಶದಲ್ಲಿ ಮುಸಲ್ಮಾನರ ದಿಕ್ಕು ತಪ್ಪಿಸುತ್ತಿದೆ ಎಂದು ಗೋವಾ ಹಜ್ ಸಮಿತಿಯ ಅಧ್ಯಕ್ಷ ಶೇಖ ಜೀನಾ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಶೇಖ ಜೀನಾ, ಪಿ.ಆಫ್.ಐ. ಯ ಅಸ್ತಿತ್ವದ ಬಗ್ಗೆ ಪ್ರಶ್ನೆ ಕೇಳುತ್ತ, ರಾಷ್ಟ್ರೀಯ ಹಜ್ ಸಮಿತಿ ಅಧ್ಯಕ್ಷ ಆಗಿರುವಾಗ ನಾನು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ಆದರೆ ನನಗೆ ಪಿ.ಆಫ್.ಐ ನ ಅಸ್ತಿತ್ವ ಎಲ್ಲೂ ಕಾಣಲಿಲ್ಲ. ಪಿ.ಆಫ್.ಐ. ಸ್ಥಾಪನೆ ಕೇರಳದಲ್ಲಿ ಆಯಿತೆಂದು ಅದರ ಸದಸ್ಯರು ಹೇಳುತ್ತಾರೆ. ಆದರೆ ಕೊಚ್ಚಿ ಮತ್ತು ಅನ್ಯ ನಗರಗಳಲ್ಲಿ ಅದರ ಸುಳಿವು ಕಾಣುವುದಿಲ್ಲ ಎಂದರು.

ಕರ್ನಾಟಕ ಮತ್ತು ಕೇರಳ ಗಡಿಯ ಯಾವುದಾದರೊಂದು ಕೊಂಪೆಯಲ್ಲಿ ಪಿ.ಆಫ್.ಐ. ಸ್ಥಾಪನೆ ಆಗಿರಬಹುದು ಎಂದು ಹೇಳಿ ಹೀಯಾಳಿಸಿದರಲ್ಲದೆ, ಪಿ ಆಫ್.ಐ ಗೋವಾದಲ್ಲಿ ಕೆಲವು ಉಪಕ್ರಮಗಳನ್ನು ನಡೆಸುತ್ತಿದೆ. ಪಿ.ಆಫ್.ಐ ಕಾಂಗ್ರೆಸ್ಸಿನ ಇನ್ನೊಂದು ಮುಖವಾಗಿದೆ. ಕಾಂಗ್ರೆಸ್ ಪಕ್ಷ ಈಗ ಅಳಿವಿನ ಅಂಚಿಗೆ ಬಂದಿದ್ದು, ಪಿ.ಆಫ್.ಐ ಈಗ ಕಾಂಗ್ರೆಸನಲ್ಲಿ ವಿಲೀನವಾಗುವುದು ಒಳ್ಳೆಯದು. ಪಿ.ಆಫ್.ಐ ಚುನಾವಣೆಯಲ್ಲಿ ಹೋರಾಡುವುದಿಲ್ಲ. ಗೋವಾದಲ್ಲಿ ಎಲ್ಲಾ ಧರ್ಮೀಯರು ಒಗ್ಗಟ್ಟಿನಿಂದ ಇದ್ದಾರೆ, ಇಲ್ಲಿ ಯಾರು ಅವರವರಲ್ಲಿ ಧಾರ್ಮಿಕ ಭೇದ ನಿರ್ಮಾಣ ಮಾಡುವ ಪ್ರಯತ್ನ ಮಾಡಬಾರದು. ಭಾಜಪದ ಸಮಯದಲ್ಲಿ ರಾಜ್ಯದ ಮುಸ್ಲಿಮರ ಪ್ರಗತಿಯಾಗಿದೆ. ಪಿ.ಆಫ್.ಐ. ಇದು ಮುಸಲ್ಮಾನ ಸಂಘಟನೆಯಾಗಿದ್ದು, ಲೋಕತಂತ್ರದಲ್ಲಿ ಇಂತಹ ಸಂಘಟನೆಗಳ ಉಳಿವು ಇಲ್ಲ ಕಟುವಾಗಿ ಟೀಕಿಸಿದ್ದಾರೆ.

Leave A Reply