ಕಡಬ: ಕಳಾರ ಸಮೀಪ ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ!! ಕುತ್ತಿಗೆ ಕಡಿದ ಸಹಿತ ಜೀವಂತ ಜಾನುವಾರುಗಳು ವಶಕ್ಕೆ

Share the Article

ಕಡಬ: ಇಲ್ಲಿನ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಕಾರ್ಯಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಕಡಬ ಠಾಣಾ ನೂತನ ಎಸ್.ಐ ಆಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದು, ಸ್ಥಳದಲ್ಲಿ ಮಾಂಸಕ್ಕಾಗಿ ಕಡಿದ ಹಾಗೂ ಜೀವಂತವಿದ್ದ ಗೋವುಗಳನ್ನು ವಶಕ್ಕೆ ಪಡೆದುಕೊಂಡ ಘಟನೆಯೊಂದು ವರದಿಯಾಗಿದೆ.

ಅಕ್ರಮ ಕಸಾಯಿಖಾನೆಯ ಬಗ್ಗೆ ಮಾಹಿತಿ ಬಂದಕೊಡಲೇ ಠಾಣಾ ಎ.ಎಸ್.ಐ ಸುರೇಶ್ ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆದಿದ್ದು, ಸ್ಥಳದಲ್ಲಿ ಪತ್ತೆಯಾದ ಗೋವಿನ ಕಡಿದ ತಲೆ, ಕಾಲುಗಳ ಸಹಿತ ಜೀವಂತ ಗೋವುಗಳನ್ನ ವಶಕ್ಕೆ ಪಡೆದುಕೊಂಡ ಸಂದರ್ಭ ಸ್ಥಳೀಯರು ಸೇರಿಕೊಂಡು ಪೊಲೀಸರ ಕೈಯಿಂದ ವಶಪಡಿಸಿಕೊಂಡ ಗೋವುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು,ಈ ವೇಳೆ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದಿದ್ದು, ಕಸಾಯಿಖಾನೆಗೆ ಸಂಬಂಧಿಸಿದ ಫಾರೂಕ್ ಹಾಗೂ ಮತ್ತಿತರರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply