Home latest ಉಡುಪಿ : ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಡೆತ್ ನೋಟಿನಲ್ಲಿ ಮೂವರು ಪೊಲೀಸರ ಹೆಸರು ಉಲ್ಲೇಖ

ಉಡುಪಿ : ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಡೆತ್ ನೋಟಿನಲ್ಲಿ ಮೂವರು ಪೊಲೀಸರ ಹೆಸರು ಉಲ್ಲೇಖ

Hindu neighbor gifts plot of land

Hindu neighbour gifts land to Muslim journalist

ಉಡುಪಿ : ರೈಫಲ್ ನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.

ರಾಜೇಶ್ ಕುಂದರ್ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. ಇಷ್ಟುಮಾತ್ರವಲ್ಲದೇ ಡೆತ್ ನೋಟ್ ನಲ್ಲಿ ಮೂರು ಮಂದಿಯ ಹೆಸರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜೇಶ್ ಕುಂದರ್ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಮೂರು ಮಂದಿ ಕಾರಣ ಎಂದು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲಿ ಇನ್ನೊಬ್ಬರು ಕೂಡ ತನಗೆ ಹಿಂಸೆ ನೀಡಿದ್ದಾರೆ ಎಂದು ರಾಜೇಶ್ ಕುಂದರ್ ಹೇಳುತ್ತಿದ್ದರು.

ಶನಿವಾರ ಬೆಳಿಗ್ಗೆ ರಾಜೇಶ್ ಕುಂದರ್ ಸ್ವ ಹಸ್ತಾಕ್ಷರದಲ್ಲಿ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಮೂವರು ಪೋಲಿಸರ ವಿರುದ್ಧ ಆತ್ಮಹತ್ಯೆ ಪ್ರಚೋದನಾ ಪ್ರಕರಣ ದಾಖಲಾಗಿದೆ

ಡಿಎಆರ್ ಎಪಿಸಿ ಉಮೇಶ, ಡಿಎಆರ್ ಎಪಿಸಿ ಅಶ್ವಕ್, ಗಂಗೊಳ್ಳಿ ಠಾಣಾ ಪಿ.ಎಸ್.ಐ ನಂಜ ನಾಯ್ಕ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧ ಸೆಕ್ಷನ್ 306 ರ ಅಡಿಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಗುರುವಾರ ರಾತ್ರಿ ನಗರದ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಯ ಕಾವಲಿಗೆ ಮೂವರು ಡಿ.ಆರ್ ಪೋಲಿಸರನ್ನು ನಿಯೋಜಿಸಲಾಗಿತ್ತು.

ಶುಕ್ರವಾರ ಬೆಳಿಗ್ಗೆ ಕುರ್ಚಿಯಲ್ಲೇ ಕುಳಿತ ಸ್ಥಿತಿಯಲ್ಲಿ ರಾಜೇಶ್ ಮೃತ ದೇಹ ಪತ್ತೆಯಾಗಿತ್ತು.

ಶನಿವಾರ ಬೆಳಿಗ್ಗೆ ರಾಜೇಶ್ ಕುಂದರ್ ಜೊತೆ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಗಣೇಶ್ ಎಂಬವರು ಎಂದಿನಂತೆ ಕಚೇರಿಗೆ ತೆರಳಿ ತನ್ನ ಬ್ಯಾಗನ್ನು ಪರಿಶೀಲಿಸುತ್ತಿದ್ದಾಗ ನೋಟ್ ಬುಕ್ ನ ಒಂದು ಹಾಳೆ ರಾಜೇಶ್ ಅವರು ಬರೆದ ಡೆತ್ ನೋಟ್ ಪತ್ತೆಯಾಗಿದೆ. ಮೇಲಾಧಿಕಾರಿಗಳಿಗೆ ಈ ಮಾಹಿತಿಯನ್ನು ತಿಳಿಸಿ ನಗರ ಠಾಣೆಗೆ ಡೆತ್ ನೋಟನ್ನು ಹಾಜರು ಪಡಿಸಿದ್ದಾರೆ.

ಮೃತ ಡಿಆರ್ ಹೆಡ್ ಕಾನ್ಸ್ ಟೇಬಲ್ ರಾಜೇಶ್ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ.

ಡೆತ್ ನೋಟನ್ನು ಹ್ಯಾಂಡ್ ರೈಟಿಂಗ್ ತಜ್ಞರಿಗೆ ಪರಿಶೀಲನೆಗೆ ಕಳುಹಿಸಿದ್ದೇವೆ. ರಾಜೇಶ್ ಅವರ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.